Friday, 13th December 2024

ಬುದ್ಗಾಮ್ ನಲ್ಲಿ ಎನ್‌ಕೌಂಟರ್‌: ಭಯೋತ್ಪಾದಕನ ಹತ್ಯೆ

ಬುದ್ಗಾಮ್: ಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಪರಿಚಿತ ಭಯೋತ್ಪಾದ ಕನನ್ನು ಹತ್ಯೆ ಮಾಡಲಾಗಿದೆ.

ಈ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಪಡೆದ ನಂತರ ಸೈನಿಕರು ಬುದ್ಗಾಮ್‌ನಲ್ಲಿ ಮೊಬೈಲ್ ವಾಹನ ತಪಾಸಣಾ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿ ದ್ದಾರೆ.

“ತಪಾಸಣೆಗಾಗಿ ಕ್ಯಾಬ್ ಅನ್ನು ನಿಲ್ಲಿಸಲು ಸೂಚಿಸಲಾಯಿತು ಆದರೆ ಒಳಗಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿ ದರು, ಪ್ರತಿದಾಳಿ ನಡೆಸಲಾಯಿತು. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿರು ವಾಗಲೇ ಒಬ್ಬ ಭಯೋತ್ಪಾದಕ ನನ್ನು ಕೊಲ್ಲಲಾಯಿತು.” ಎಂದು ಅಧಿಕಾರಿ ಹೇಳಿದರು.

ಎರಡು ಶವಗಳು ನೆಲದ ಮೇಲೆ ಕಾಣಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಕಾರ್ಯಾಚರಣೆ ಮುಗಿದ ನಂತರ ಹೇಳಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.