Friday, 13th December 2024

ಗುಡಿಸಲಿಗೆ ಬೆಂಕಿ: ದಂಪತಿ, ಮಕ್ಕಳು ಸಜೀವ ದಹನ

ಕಾನ್ಪುರ: ಕಾನ್ಪುರ್ ದೇಹತ್‌ನಲ್ಲಿ ಗುಡಿಸಲಿಗೆ ಬೆಂಕಿ ತಗುಲಿ ದಂಪತಿ ಮತ್ತು ಮೂವರು ಮಕ್ಕಳು ಸಜೀವ ದಹನಗೊಂಡಿದ್ದಾರೆ.

ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಮೌ ಗ್ರಾಮದ ಬಂಜಾರರ ದೊಡ್ಡ ಗುಡಿಸಲಿನಲ್ಲಿ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಾಗ ಕುಟುಂಬ ಸ್ಥರು ಗುಡಿಸಲಿನಲ್ಲಿ ಮಲಗಿದ್ದರು. ಅವರು ಸಕಾಲಕ್ಕೆ ಹೊರಬರಲು ಸಾಧ್ಯ ವಾಗಲಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಿದರಾದರೂ ಅಷ್ಟೊತ್ತಿಗಾಗಲೇ ಕುಟುಂಬದ ಐವರು, ಮನೆ ಸುಟ್ಟು ಹೋಗಿವೆ. ಠಾಣಾ ಪ್ರಭಾರಿ, ಸಿಒ ಮತ್ತು ಎಸ್ಪಿ ತಡರಾತ್ರಿ ಘಟನಾ ಸ್ಥಳಕ್ಕೆ ಧಾವಿಸಿ, ತನಿಖೆ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಎಸ್ಪಿ ಕಾನ್ಪುರ ದೇಹತ್ ಬಿಬಿಜಿಟಿಎಸ್ ಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಮೌ ಗ್ರಾಮದಲ್ಲಿ ಬಂಜಾರರ ದೊಡ್ಡ ಕಾಲೋನಿ ಇದೆ. ಶನಿವಾರ ತಡರಾತ್ರಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ದಂಪತಿ ಸತೀಶ್(30) ಮತ್ತು ಕಾಜಲ್ (26) ಮೂವರು ಮಕ್ಕಳಾದ ಸನ್ನಿ(6), ಸಂದೀಪ್(5), ಗುಡಿಯಾ(3) ಗುಡಿಸಲಿನಲ್ಲಿಯೇ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿಸಿದ್ದಾರೆ.