Wednesday, 11th December 2024

ಬಸ್ ಡಂಪರ್‌ಗೆ ಡಿಕ್ಕಿ: ನಾಲ್ವರ ಸಾವು, 45 ಜನರಿಗೆ ಗಾಯ

ಇಟಾವಾ: ಉತ್ತರ ಪ್ರದೇಶದ ಇಟಾವಾ ಬಳಿಯ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಪ್ರಯಾಣಿಕರ ಬಸ್ ಡಂಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟು 45 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಸ್ ಯುಪಿಯ ಗೋರಖ್‌ಪುರದಿಂದ ರಾಜಸ್ಥಾನದ ಅಜ್ಮೀರ್‌ಗೆ ಹೋಗುತ್ತಿತ್ತು ಎನ್ನಲಾ ಗಿದೆ. ಡಂಪರ್‌ನ ಟೈರ್‌ ಒಡೆದು ವೇಗವಾಗಿ ಬಂದ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಗಾಯಾಳುಗಳನ್ನು ತಕ್ಷಣವೇ ಸೈಫೈನಲ್ಲಿರುವ ಪಿಜಿಐ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳ ವರದಿ ತಿಳಿಸಿದೆ.