Thursday, 3rd October 2024

BSF Personnel : ಜಮ್ಮು& ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಉರುಳಿ 3 ಬಿಎಸ್ಎಫ್ ಸಿಬ್ಬಂದಿ ಸಾವು, 28 ಮಂದಿ ಗಾಯ

BSF personnel

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಬಸ್ ರಸ್ತೆಯಿಂದ ಜಾರಿ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ ಮೂವರು ಗಡಿ ಭದ್ರತಾ ಪಡೆ (BSF Personnel) ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಬಸ್‌ನಲ್ಲಿದ್ದ ಕನಿಷ್ಠ 28 ಸಿಬ್ಬಂದಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಗಾಯಗೊಂಡವರಿಗೆ ತಕ್ಷಣದ ಆರೈಕೆ ನೀಡಲು ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದೆ.

ಅಪಘಾತದ ಕಾರಣದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 25 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯಲಿರುವ ಮೊದಲು ಈ ಅಪಘಾತ ಸಂಭವಿಸಿದೆ.

ಗಾಯಗೊಂಡ ಆರು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 52 ಆಸನಗಳ ಬಸ್‌ ಅಪಘಾತಕ್ಕೆ ಒಳಗಾಗಿದೆ. ವಿಧಾನಸಭಾ ಚುನಾವಣೆಯ ಮುಂದಿನ ಹಂತದ ನಿಯೋಜನೆಗಾಗಿ ಬಿಎಸ್ಎಫ್ ಸಿಬ್ಬಂದಿಯ ಏಳು ಬಸ್ ಬೆಂಗಾವಲು ಪಡೆಯ ಭಾಗವಾಗಿ ಸಾಗುತ್ತಿತ್ತು. ಅಫಘಾತಕ್ಕೆ ಒಳಗಾದ ಬಸ್‌ನಲ್ಲಿ 35 ಬಿಎಸ್ಎಫ್ ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Forex Reserves : ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ 689.458 ಬಿಲಿಯನ್ ಡಾಲರ್‌ಗೆ ಏರಿಕೆ

ಬಸ್ ಗುಡ್ಡಗಾಡು ರಸ್ತೆಯ ಮೂಲಕ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ 40 ಅಡಿ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಎಲ್ಲಾ ಬಿಎಸ್ಎಫ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.