Wednesday, 11th December 2024

ಒಂದು ಲೋಕಸಭೆ, ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಬೈಎಲೆಕ್ಷನ್ ದಿನಾಂಕ ಪ್ರಕಟ

ನವದೆಹಲಿ: ಐದು ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಏಪ್ರಿಲ್ 12 ರಂದು ಒಂದು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಬಿಜೆಪಿಯು ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರದ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡು ಗಡೆ ಮಾಡಿದೆ.

ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಗ್ನಮಿತ್ರ ಪಾಲ್ ಅವರನ್ನು, ಇವರ ವಿರುದ್ಧ ತೃಣಮೂಲ ಕಾಂಗ್ರೆಸ್ ಚಲನಚಿತ್ರ ನಟ ಶತ್ರುಘ್ನ ಸಿನ್ಹಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಬಾಲಿಗುಂಗೆ ವಿಧಾನಸಭೆಯಿಂದ ಕಿಯಾ ಘೋಷ್ ಹೆಸರನ್ನು ಬಿಜೆಪಿ ಘೋಷಿಸಿದ್ದು, ಇವರ ವಿರುದ್ಧ ಬಿಜೆಪಿ ತೊರೆದಿರುವ ಬಾಬುಲ್ ಸುಪ್ರಿಯೋ ಅವರನ್ನು ಟಿಎಂಸಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಎಲ್ಲಾ ಸ್ಥಾನಗಳಿಗೆ ಏಪ್ರಿಲ್ 12 ರಂದು ಮತದಾನ ನಡೆಯಲಿದೆ. ಅದರ ಫಲಿತಾಂಶಗಳು ಏಪ್ರಿಲ್ 16 ರಂದು ಬರಲಿದೆ.

ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಶುಕ್ರವಾರ ಪಟ್ಟಿ ಯನ್ನು ಬಿಡುಗಡೆ ಮಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಅಸ್ಸಾಂನಿಂದ ಪಬಿತ್ರಾ ಮಾರ್ಗರಿಟಾ, ಹಿಮಾಚಲ ಪ್ರದೇಶದಿಂದ ಡಾ. ಸಿಕಂದರ್ ಕುಮಾರ್, ನಾಗಾಲ್ಯಾಂಡ್‌ನಿಂದ ಎಸ್. ಫಾಂಗ್ನಾನ್ ಕೊನ್ಯಾಕ್ ಮತ್ತು ತ್ರಿಪುರದಿಂದ ಡಾ. ಮಾಣಿಕ್ ಸಹಾ ಆಯ್ಕೆಯಾಗಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಹಾಲಿ ಶಾಸಕಿ ಅಗ್ನಿಮಿತ್ರಾ ಪಾಲ್ ಅವರು ಅಸಾನೋಲ್ ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. 2021ರಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸಯಾನಿ ಘೋಶ್ ವಿರುದ್ಧ ಜಯ ದಾಖಲಿಸಿದ್ದರು. ಇನ್ನು ಬ್ಯಾಲಿಗುಂಜ್ ಉಪ ಚುನಾವಣೆಗೂ ಅಭ್ಯರ್ಥಿಯನ್ನು ಬಿಜೆಪಿ ಹೆಸರಿಸಿದ್ದು, ಕೇಯಾ ಘೋಶ್ ಅವರು ಸ್ಪರ್ಧಿಸಲಿದ್ದಾರೆ.