Tuesday, 10th December 2024

BYJUS: 22 ಶತಕೋಟಿ ಡಾಲರ್‌ ಮೌಲ್ಯದ ಬೈಜುಸ್ ಬೆಲೆ ಈಗ ಶೂನ್ಯ!

BYJUS

ಭಾರತದ ಅತೀ ದೊಡ್ಡ ಸ್ಟಾರ್ಟ್‌ಅಪ್‌ ( India’s biggest start-up) ಆಗಿದ್ದ ಬೈಜುಸ್ (BYJUS) ಈಗ ಸಂಪೂರ್ಣ ದಿವಾಳಿಯಾಗಿದೆ ಎಂದು ಬೈಜುಸ್‌ ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಘೋಷಿಸಿದ್ದಾರೆ. ಒಂದು ಕಾಲದಲ್ಲಿ 22 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಸ್ಟಾರ್ಟ್ಅಪ್ ಆಗಿದ್ದ ಬೈಜುಸ್‌ನ ಪ್ರಸ್ತುತ ಮೌಲ್ಯ ಶೂನ್ಯವಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಬಹು ದೊಡ್ಡ ಖ್ಯಾತಿ ಗಳಿಸಿದ ಬೈಜುಸ್ ಕಂಪನಿಯನ್ನು ರಕ್ಷಿಸಬೇಕು ಎನ್ನುವ ಭರವಸೆಯಷ್ಟೇ ಉಳಿದಿದೆ ಎಂಬುದಾಗಿ ಅವರು ಹೇಳಿದ್ದಾರೆ. 21ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಜುಸ್ ಕೋವಿಡ್-19 ಸಾಂಕ್ರಾಮಿಕದ ಕಾಲದಲ್ಲಿ ಆನ್‌ಲೈನ್ ಶಿಕ್ಷಣ ಕೋರ್ಸ್‌ಗಳನ್ನು ನೀಡುವ ಮೂಲಕ ಭಾರಿ ಜನಪ್ರಿಯವಾಯಿತು. 2022ರಲ್ಲಿ ಇದರ ಮೌಲ್ಯವು 22 ಶತಕೋಟಿ ಡಾಲರ್ ಗೆ ಏರಿತ್ತು. ಆದರೆ ಹಲವು ತಿಂಗಳ ಕಾಲ ಪಾವತಿಸದ ಬಾಕಿ ಮತ್ತು ದುರುಪಯೋಗದ ಕಾರಣದಿಂದ ಹಲವು ಆರೋಪಗಳಿಗೆ ಗುರಿಯಾಗಿದೆ. ಆದರೆ ಬೈಜುಸ್ ಇದನ್ನು ತಿರಸ್ಕರಿಸಿದೆ.

ಕಂಪೆನಿಯ ಮೌಲ್ಯ ಈಗ ಶೂನ್ಯ ಎಂದು ರವೀಂದ್ರನ್ ಇತ್ತೀಚೆಗೆ ದುಬೈನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.

BYJUS

ನಾವು ನಮ್ಮ ಪ್ರಗತಿಯ ಬಗ್ಗೆ ಅತಿಯಾಗಿ ಅಂದಾಜು ಮಾಡಿದ್ದೆವು. ಒಂದೇ ಬಾರಿಗೆ ಹಲವಾರು ಕ್ಷೇತ್ರಗಳನ್ನು ಪ್ರವೇಶಿಸಿದ್ದು ತುಂಬಾ ಆತುರದ ನಿರ್ಧಾರವಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಕಂಪನಿ ಪಡೆದ 1 ಶತಕೋಟಿ ಡಾಲರ್ ದುರುಪಯೋಗದ ಬಗ್ಗೆ ಅಮೆರಿಕದ ಸಾಲದಾತರು ಆಗಸ್ಟ್‌ನಲ್ಲಿ ಭಾರತೀಯ ಸುಪ್ರೀಂ ಕೋರ್ಟ್‌ಗೆ ದೂರು ನೀಡಿದ ಬಳಿಕ ಬೈಜುಸ್ ಮೌಲ್ಯ ಕುಸಿತದ ಹಾದಿ ಹಿಡಿದು ಈಗ ದಿವಾಳಿಯಾಗಿದೆ. ಈ ದೂರಿನ ಕುರಿತು ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ನೀಡಬೇಕಿದೆ.

HD Kumaraswamy: ಶಿರೂರು ಗುಡ್ಡ ಕುಸಿತ ದುರಂತ; ಮೃತನ ಪುತ್ರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗ

ಒಂದು ಕಾಲದಲ್ಲಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿದ್ದ ಬೈಜುಸ್, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಏನೇ ಬರಲಿ, ದಾರಿ ಹುಡುಕುತ್ತೇನೆ ಎಂದು ರವೀಂದ್ರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.