Sunday, 13th October 2024

ಕೆನಡಾದಲ್ಲಿ ಭಾರತದ ವಿಮಾನಗಳಿಗೆ ಆಗಸ್ಟ್ 21 ರವರೆಗೆ ನಿಷೇಧ

ನವದೆಹಲಿ : ಭಾರತದಿಂದ ನೇರ ವಿಮಾನಗಳ ಮೇಲಿನ ನಿಷೇಧವನ್ನು ಕೆನಡಾ ಸರ್ಕಾರವು ಇನ್ನೂ 30 ದಿನಗಳ ವರೆಗೆ ವಿಸ್ತರಿಸಿದೆ. ಆಗಸ್ಟ್ 21 ರವರೆಗೆ ಭಾರತದಿಂದ ವಿಮಾನಗಳ ಮೇಲಿನ ನಿಷೇಧ ವನ್ನು ಮುಂದುವರೆಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಮತ್ತು ಕೊರೊನಾ ವೈರಸ್ ನ ಡೆಲ್ಟಾ ರೂಪಾಂತರದ ಹರಡುವಿಕೆಯ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 22 ರಂದು ಮೊದಲ ಬಾರಿಗೆ ನಿಷೇಧ ಹೇರಿದ ನಂತರ ಇದು ನಾಲ್ಕನೇ ಬಾರಿ ವಿಸ್ತರಣೆಯಾಗಿದೆ.

ಕೆನಡಾಕ್ಕೆ ಹೊರಡುವ ಮತ್ತೊಂದು ಹಂತದಲ್ಲಿ ಸಂಪರ್ಕಿಸುವ ಭಾರತದ ಪ್ರಯಾಣಿಕರಿಗೆ ಕೆನಡಾದ ಗಮ್ಯಸ್ಥಾನಕ್ಕೆ ತಮ್ಮ ಪ್ರಯಾಣ ಮುಂದುವರಿಸುವ ಮೊದಲು ಕಡ್ಡಾಯ ಆರ್ ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವಿದೆ ಎಂದು ಕೆನಡಾ ಸರ್ಕಾರ ಹೇಳಿದೆ.