Friday, 2nd June 2023

ಆರ್‌ಎಸ್‌ಎಸ್ ಅನ್ನು ಇನ್ಮುಂದೆ ‘ಸಂಘ ಪರಿವಾರ್’ ಎಂದು ಉಲ್ಲೇಖಿಸುವುದಿಲ್ಲ: ರಾಗಾ

ನವದೆಹಲಿ: ಆರ್‌ಎಸ್‌ಎಸ್ ಮತ್ತು ಅದರ ಸಂಬಂಧಿತ ಸಂಘಟನೆಗಳನ್ನು ‘ಸಂಘ ಪರಿವಾರ್’ ಎಂದು ಕರೆಯುವುದು ತಪ್ಪು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ರಾಹುಲ್ ಗಾಂಧಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇನ್ನು ಮುಂದೆ ‘ಸಂಘ ಪರಿವಾರ್’, ‘ಒಂದು ಕುಟುಂಬ’ ಎಂದು ಉಲ್ಲೇಖಿಸುವುದಿಲ್ಲ ಎಂದಿದ್ದಾರೆ.

ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ ಅಲ್ಪಸಂಖ್ಯಾತರನ್ನು ತುಳಿಯುವ ಸಂಘ ಪರಿವಾರದ “ಕೆಟ್ಟ ಪ್ರಚಾರ”ದ ಪರಿಣಾಮ ಉತ್ತರ ಪ್ರದೇಶದಲ್ಲಿ ಕೇರಳ ಮೂಲದ ಸನ್ಯಾಸಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಆರ್ ಎಸ್‌ಎಸ್ ಮತ್ತು ಸಂಬಂಧಿತ ಸಂಸ್ಥೆಗಳನ್ನು ಸಂಘ ಪರಿವಾರ್ ಎಂದು ಕರೆಯುವುದು ಸರಿಯಲ್ಲ ಎಂದು ನಾನು ನಂಬುತ್ತೇನೆ. ಒಂದು ಕುಟುಂಬದಲ್ಲಿ ಮಹಿಳೆಯರಿರುತ್ತಾರೆ, ವೃದ್ಧರ ಬಗ್ಗೆ ಗೌರವವಿರುತ್ತದೆ, ಸಹಾನುಭೂತಿ ಮತ್ತು ವಾತ್ಸಲ್ಯದ ಭಾವನೆ ಇರುತ್ತದೆ. ಆದರೆ ಇದು ಆರ್ಎಸ್‌ಎಸ್ ನಲ್ಲಿ ಇಲ್ಲ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

error: Content is protected !!