Friday, 13th December 2024

ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ ನಿಧನ

ಚೆನ್ನೈ: ಕರ್ನಾಟಿಕ್ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86) ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಭಾರತ ಸರ್ಕಾರದ ಪದ್ಮಭೂಷಣ, ಮತ್ತು ತಮಿಳುನಾಡು ಸರ್ಕಾರದ ಕಲೈಮಮಣಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದ ನಾರಾಯಣಸ್ವಾಮಿ ಅವರು, ಶೆಮ್ಮಂಗುಡಿ ಸಂಪ್ರದಾಯದ ಮಹತ್ವದ ಸಾಧಕರಾಗಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರಿ ಯರು ಮತ್ತು ಅಸಂಖ್ಯಾತ ಶಿಷ್ಯರು ಇದ್ದಾರೆ.