Saturday, 14th December 2024

ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

ರ್ಮಪುರಿ: ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಧರ್ಮಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಧಾರ್ಮಿಕ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ತಮಿಳುನಾಡಿನ ಧರ್ಮಪುರಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಇದೇ ಜ.8 ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿ ಪ್ರದೇಶದಲ್ಲಿ ಬಿಜೆಪಿ ಮುಖ್ಯಸ್ಥರ ‘ಎನ್ ಮನ್ ಎನ್ ಮಕ್ಕಳ್’ ರ್ಯಾಲಿಯಲ್ಲಿ ಅಣ್ಣಾಮಲೈ ಮತ್ತು ಕ್ರಿಶ್ಚಿಯನ್ ಯುವಕರ ಗುಂಪಿನ ನಡುವೆ ಚರ್ಚ್ ಪ್ರವೇಶವನ್ನು ವಿರೋಧಿಸಿ ವಾಗ್ವಾದ ನಡೆದಿತ್ತು.
ಅಣ್ಣಮಲೈ ತಡೆದ ಗುಂಪು ಅಣ್ಣಾಮಲೈ ಅವರು ತಮ್ಮ ರ್ಯಾಲಿಯಲ್ಲಿ ಪಾಪಿರೆಡ್ಡಿಪಟ್ಟಿಯ ಸೇಂಟ್ ಲೂರ್ಡ್ಸ್ ಚರ್ಚ್‌ನಲ್ಲಿರುವ ಮೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದರಿಂದ ಈ ವೇಳೆ ಗಲಾಟೆ, ಮಾತಿನ ಚಕಮಕಿ ನಡೆದಿದೆ. ಮಣಿಪುರ ಹಿಂಸಾಚಾರ ಉಲ್ಲೇಖಿಸಿ ಯುವಕರ ಗುಂಪು ಅಣ್ಣಾಮಲೈ ಗುಂಪನ್ನು ಚರ್ಚ್‌ಗೆ ಪ್ರವೇಶದಂತೆ ತಡೆಯಿತು. ಜೊತೆಗೆ ಅವರ ವಿರುದ್ಧ ಘೋಷಿಸಿದರು.