Saturday, 14th December 2024

ವಿವೇಕ್ ಬಿಂದ್ರಾ ವಿರುದ್ಧ ಪತ್ನಿ ಕೇಸ್ ದಾಖಲು

ನವದೆಹಲಿ: ಪ್ರೇರಕ ಭಾಷಣಕಾರ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ವಿವೇಕ್ ಬಿಂದ್ರಾ ವಿರುದ್ಧ ಅವರ ಪತ್ನಿಯೇ ಕೇಸ್ ದಾಖಲಿಸಿದ್ದಾರೆ.

ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರೇರಕ ಭಾಷಣಕಾರ ವಿವೇಕ್ ಬಿಂದ್ರಾ ವಿರುದ್ಧ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಎಫ್ಐಆರ್ ದಾಖಲಿಸಿರುವುದಾಗಿ ವರದಿಯಾಗಿದೆ. ಡಿಸೆಂಬರ್ 7 ರ ಮುಂಜಾನೆ ಬಿಂದ್ರಾ ಮತ್ತು ಅವರ ತಾಯಿ ಪ್ರಭಾ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಅವರಿಬ್ಬರ ನಡುವೆ ಯಾನಿಕಾ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ವೇಳೆ ಬಿಂದ್ರಾ ಅವರು ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.

ಪರಿಣಾಮ ಯಾನಿಕಾ ದೇಹಕ್ಕೆ ಗಾಯಗಳಾಗಿವೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಡಿಸೆಂಬರ್ 6ರಂದು ಬಿಂದ್ರಾ ಹಾಗೂ ಯಾನಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಯಾನಿಕಾಳನ್ನು ರೂಮಿನೊಳಗೆ ಕರೆದುಕೊಂಡು ಹೋಗಿದ್ದ ಬಿಂದ್ರಾ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ.

ಇನ್ನು ಹಲ್ಲೆಯಿಂದಾಗಿ ಯಾನಿಕಾಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಡಾ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಮತ್ತು ಉತ್ತಮ ಪ್ರೇರಕ ಭಾಷಣಕಾರ ಬಿಂದ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.