ಗುವಾಹಟಿ: ಅಸ್ಸಾಂನಲ್ಲಿ ‘ಕ್ಯಾಶ್ ಫಾರ್ ಮಾರ್ಕ್ಸ್’ ಹಗರಣದಲ್ಲ ವಿದ್ಯಾರ್ಥಿಗಳ ಅಂಕಗಳನ್ನು ಹೆಚ್ಚಿಸಲು ಗುವಾಹಟಿ ವಿಶ್ವವಿದ್ಯಾ ಲಯದ ಸಿಬ್ಬಂದಿ ಹಣ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಡಿಜಿಟಲ್ ಟ್ಯಾಂಪರಿಂಗ್ ಮಾಡಿದ ಶಂಕಿತ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ
ಗುವಾಹಟಿ ವಿವಿ ಸಂಯೋಜಿತ ಬಾರ್ಪೇಟಾದಲ್ಲಿರುವ ಗಣೇಶಲಾಲ್ ಚೌಧರಿ ಕಾಲೇಜಿನ ಶಿಕ್ಷಕರೊಬ್ಬರು ನಕಲಿ ಅಂಕಗಳನ್ನು ಪತ್ತೆ ಹಚ್ಚುವ ಮೂಲಕ ಹಗರಣವನ್ನು ಬಯಲಿಗೆಳೆದಿದ್ದಾರೆ. ಕಾಲೇಜಿನ ಅಜೀಜುಲ್ ಹಕ್ ಎಂಬ ವಿದ್ಯಾರ್ಥಿಯ ನೈಜ ಅಂಕಗಳಿಗೂ ಅಂಕಪಟ್ಟಿಯಲ್ಲಿನ ಅಂಕಗಳಿಗೂ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ.
ಹಲವಾರು ಸೆಮಿಸ್ಟರ್‌ಗಳಲ್ಲಿ ಅಂಕಗಳನ್ನು ಹೆಚ್ಚಿಸುವುದಕ್ಕಾಗಿ ಕಂಪ್ಯೂಟರ್ ಆಪರೇಟರ್‌ಗಳಿಗೆ 10 ಸಾವಿರ ರೂ. ಪಾವತಿಸಿರುವುದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ.
ಅಸ್ಸಾಂ ಪೊಲೀಸರು ಮತ್ತು ಅಪರಾಧ ತನಿಖಾ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಕೆ.ಕೃಷ್ಣಮೂರ್ತಿಯನ್ನು ಈಗಾಗಲೇ ಬಂಧಿಸಲಾಗಿದೆ.