• ಎಸ್‌ಯುವಿಗಳು, ಹೈಬ್ರಿಡ್‌ಗಳು ಹಾಗೂ ಐರೋಪ್ಯ ವಾಹನಗಳಿಗೆ ಅಧಿಕ-ಕಾರ್ಯಕ್ಷಮತೆಯ ಲೂಬ್ರಿಕೆಂಟ್‌ಗಳ ಪರಿಚಯ
• EDGEಶ್ರೇಣಿಯು, ಭಾರತದಾದ್ಯಂತ ಕ್ಯಾಸ್ಟ್ರಾಲ್ ಕಾರ್ಯಾಗಾರಗಳು ಹಾಗೂ ಆನ್‌ಲೈನ್ ಮತ್ತು ಆಫ್‌ಲೈನ್ ರೀಟೇಲ್ ಮಳಿಗೆಗಳಲ್ಲಿ ಲಭ್ಯ
• ಶಾ ರೂಖ್ ಖಾನ್ ಇರುವ ಜಾಹೀರಾತು ಪ್ರಚಾರ “ಸ್ಟೇ ಅಹೆಡ್(‘Stay Ahead’)ಈಗ ನೇರಪ್ರಸಾರದಲ್ಲಿ(ಇಲ್ಲಿ ಯೂಟ್ಯೂಬ್ ಲಿಂಕ್ ಇದೆ)
• ಟಿ20 ವಿಶ್ವಕಪ್ ಹಾಗೂ ಡಿಸ್ನೆ ಸ್ಟಾರ್ ಮೇಲೆ ವಿಂಬಲ್ಡನ್‌ನ ಪ್ರಸಾರಕ್ಕಾಗಿ ಕ್ಯಾಸ್ಟ್ರಾಲ್ ಸಹ ಪ್ರಾಯೋಜಕ ಸಂಸ್ಥೆಯಾಗಿದೆ
ಕ್ಯಾಸ್ಟ್ರಾಲ್ ಇಂಡಿಯಾ ಲಿಮಿಟೆಡ್, ಕ್ಯಾಸ್ಟ್ರಾಲ್ ಎಡ್ಜ್ ಲೈನ್ ಒಳಗೆ ಕೌತುಕಮಯವಾದ ಉತ್ಪನ್ನ ಶ್ರೇಣಿಯನ್ನು ಇಂದು ಅನಾವರಣಗೊಳಿಸಿತು. ಆನ್-ಡಿಮ್ಯಾಂಡ್ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಂಡಿರುವ ಈ ಪ್ರೀಮಿಯಮ್ ಹಾಗೂ ಅತ್ಯಾಧುನಿಕ ಇಂಜಿನ್ ಆಯಿಲ್, ಈಗ ಪ್ರಯಾಣಿಕ ಕಾರು ವರ್ಗಕ್ಕಾಗಿ ವಿನ್ಯಾಸಗೊಂಡ ಮೂರು ಹೊಸ ವೈವಿಧ್ಯಗಳನ್ನು ಒಳಗೊಂಡಿದ್ದು ಆಟೋಮೋಟಿವ್ ಗ್ರಾಹಕರ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ.
ಈ ಪರಿಚಯಕ್ಕೆ, “ಸ್ಟೇ ಅಹೆಡ್(Stay Ahead)” ಎಂಬ ಶೀರ್ಷಿಕೆಯ ಕ್ರಿಯಾಶೀಲ ದೂರದರ್ಶನ ವಾಣಿಜ್ಯ ಜಾಹೀರಾತು ಬೆಂಬಲ ನೀಡುತ್ತಿದ್ದು, ಇದರಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಮತ್ತು ಬ್ರ್ಯಾಂಡ್ ರಾಯಭಾರಿ ಶಾರುಖ್ ಖಾನ್ ಇದ್ದಾರೆ. ಈ ಟಿವಿಸಿಯ್, ಅತ್ಯಂತ ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯದ ನಡುಬೆ ಜೂನ್ 9, 2024ರಂದು ತನ್ನ ಭರ್ಜರಿ ಪ್ರೀಮಿಯರ್ ಪೂರ್ಣಗೊಳಿಸಿದ್ದು, ಇದರಲ್ಲಿ ಖಾನ್ ಅವರು ಒಂದು ತಾಜಾ ಹಾಗೂ ಕೌತುಕಮಯವಾದ ಅವತಾರದಲ್ಲಿ ಕಾಣಿಸಿಕೊಂಡು ಕ್ಯಾಸ್ಟ್ರಾಲ್ ಎಡ್ಜ್ ಒದಗಿಸುವ ಅತ್ಯುತ್ಕೃಷ್ಟ ಕಾರ್ಯಕ್ಷಮತೆಯನ್ನು ಎತ್ತಿಹಿಡಿದಿದ್ದಾರೆ.
ಇಂದಿನ ಪಾಪಾರಾಝಿ ಸಂಸ್ಕೃತಿಯನ್ನು ಅತ್ಯಂತ ಬುದ್ಧಿವಂತಿಕೆಯಿಂದ ಪ್ರದರ್ಶಿಸುವ ಈ ವಾಣಿಜ್ಯವು, ಶಟರ್‌ಬಗ್‌ಗಳಿಂದ ದೂರವಿರಲು(ಸ್ಟೇ ಅಹೆಡ್) ಸೆಲೆಬ್ರಿಟಿಗಳು ಕಂಡುಕೊಳ್ಳುವ ವಿನೂತನ ವಿಧಾನಗಳನ್ನು ತೋರಿಸುತ್ತದೆ. ಬೇಡಿಕೆಯ ಮೇಲೆ ಇಂಜಿನ್ ಕಾರ್ಯಕ್ಷಮತೆಯು ಗಣನೀಯವಾಗಿ ವರ್ಧಿಸುತ್ತಾ, ಚಾಲಕರಿಗೆ ಯಾವುದೇ ಪರಿಸ್ಥಿತಿ ಮತ್ತು ಯಾವುದೇ ರಸ್ತೆಯಲ್ಲೂ(ಟೆರೇನ್) ಅದ್ವಿತೀಯ ಕಾರ್ಯಕ್ಷಮತೆಯ ಖಾತರಿ ಒದಗಿಸುವ ಕ್ಯಾಸ್ಟ್ರಾಲ್ ಎಡ್ಜ್‌ನ ಸಾಮರ್ಥ್ಯ ಈ ಟಿವಿಸಿಯಲ್ಲಿ ಎತ್ತಿತೋರಿಸಲಾಗಿರುವ ಮೂಲ ಸಂದೇಶವಾಗಿದೆ.
ಶಾರೂಖ್ ಖಾನ್ ಅವರು ಸ್ವತಃ ತಮ್ಮ ಪಾತ್ರ ನಟಿಸುವುದರೊಂದಿಗೆ ಆರಂಭಗೊಳ್ಳುವ ಟಿವಿಸಿ, ಕ್ಯಾಸ್ಟ್ರಾಲ್ ಎಡ್ಜ್‌ನ ಪ್ಯಾಕ್‌ಅನ್ನು ಕೈಯಲ್ಲಿ ಹಿಡಿದು ಕೊಂಡು, ಪಾರ್ಕ್ ಮಾಡಿದ ತಮ್ಮ ಕಾರಿನ ಹೊರಗಡೆ ಅವರ ತುಂಟ ನೃತ್ಯ ಚಲನೆಗಳನ್ನು ಮಾಡುವುದನ್ನು ತೋರಿಸುತ್ತದೆ. ಶೀಘ್ರವೇ ಚೇಸ್‌ನಿಂದ ಸುಸ್ತಾಗಿದ್ದ ಕ್ಷಿಪ್ರಪಾಪಾರಾಝಿಗಳು ತಮ್ಮ ಬೈಕ್‌ನಲ್ಲಿ ಕಾಣಿಸಿಕೊಂಡು, ಕೊನೆಗೂ ಶಾರೂಖ್ ಖಾನ್ ಅವರನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಾರೆ. ಈಗ ಫ್ರೇಮ್ ಒಂದು ಫ್ಲ್ಯಾಶ್‌ಬ್ಯಾಕ್‌ಗೆ ಹೋಗುತ್ತದೆ. ಇದರಲ್ಲಿ ಪಾಪಾಪ್ರಾಝಿಗಳು ಚಿತ್ರ ತೆಗೆದುಕೊಳ್ಳುವುದಕ್ಕಾಗಿ ಕುತೂಹಲದಿಂದ ಎಸ್‌ಆರ್‌ಕೆ ಅವರ ಕಾರಿಗೆ ಸನಿಹ ಹೋಗಲು ಕೌತುಕಮಯವಾಗಿ ಮತ್ತು ಆಟದ ಚೇಸ್ ಮಾಡುತ್ತಿರುತ್ತಾರೆ. ಆದರೂ, ಪ್ರತಿಬಾರಿ, ಎಸ್‌ಆರ್‌ಕೆ ಭರ್ರನೆ ಸಾಗಿ ಬಿಡುವುದರಿಂದ, ಪಾಪಾರಾಝಿಗಳು ಕೇವಲ ಅವರ ಮಸುಕು ಮಸುಕಾದ ಭಾವಚಿತ್ರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ.
ಒಂದು ಹಾಸ್ಯಮಯ ದೃಷ್ಟಿಕೋನದೊಂದಿಗೆ, ಈ ಚಿತ್ರವು, ಎಸ್‌ಆರ್‌ಕೆ ಅವರಂತಹ ಸೆಲೆಬ್‌ಗಳು, ಪಾಪಾರಾಝಿಗಳಿಗಿಂತ ಮುಂದಿರಲು(ಸ್ಟೇ ಅಹೆಡ್) ಯಾವ ರೀತಿ ವಿನೂತನ ವಿಧಾನಗಳನ್ನು ಕಂಡುಕೊಳ್ಳುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಹಗುರವಾದ ರೀತಿಯಲ್ಲಿ, ಶಾರುಖ್ ಖಾನ್ ಅವರು ಪಾಪಾರಾಝಿಗಳಿಗಿಂತ ತಾವು ಮುಂದಿರುವುದಕ್ಕೆ (ಸ್ಟೇಯಿಂಗ್ ಅಹೆಡ್) ಕಾರಣವಾದ ಕ್ಯಾಸ್ಟಾಲ್ ಎಡ್ ಇಂಜಿನ್ ಆಯಿಲ್‌ನ ಒಂದು ಪ್ಯಾಕ್‌ಅನ್ನು ಅವರ ಕೈಗಿಡುತ್ತಾ ರಹಸ್ಯ ಬಯಲು ಮಾಡುತ್ತಾರೆ. ಪಾಪಾರಾಝಿಗಳು, ಕೊನೆಗೂ ಒಂದು ಸ್ಪಷ್ಟವಾದ ಶಾಟ್ ಪಡೆದುಕೊಳ್ಳುವುದಕ್ಕಾಗಿ ತಮ್ಮ ಕ್ಯಾಮರಾಗಳನ್ನು ಸಿದ್ಧಗೊಳಿಸಿಕೊಳ್ಳುತ್ತಾರೆ. ಆದರೆ, ಶಾರುಖ್ ಖಾನ್ ಅವರು ಮತ್ತೊಮ್ಮೆ ವೇಗವಾಗಿ ಹೊರಟುಹೋಗುವುದನ್ನು ನೋಡುವ ಮೂಲಕ ಅವರ ನಿರೀಕ್ಷೆಯು ಒಂದು ಆಟಮಯ ನಿರಾಸೆಗೆ ತಿರುಗುತ್ತದೆ. ಈ ಜಗತ್ತನ್ನು ಹಿಂದಿಕ್ಕಿ “ಕ್ಯಾಸ್ಟ್ರಾಲ್ ಎಡ್ಜ್, ಸ್ಟೇ ಅಹೆಡ್” ಆಗಿ ಎಸ್‌ಆರ್‌ಕೆ ಅವರು ದೂರ ಕರಗಿಹೋಗುವುದರೊಂದಿಗೆ ಈ ವಾಣಿಜ್ಯ ಅಂತ್ಯಗೊಳ್ಳುತ್ತದೆ.
“ಶಾರುಖ್ ಖಾನ್ ಇರುವ ಈ ತೊಡಗಿಕೊಳ್ಳುವಂತಹ ಮಲ್ಟೀಮೀಡಿಯ(ಬಹುಮಾಧ್ಯಮ) ಜಾಹೀರಾತು ಪ್ರಚಾರದೊಂದಿಗೆ ನಮ್ಮ ಅಧಿಕ-ಕಾರ್ಯ ಕ್ಷಮತೆಯುಳ್ಳ ಕಾರು ಲೂಬ್ರಿಕೆಂಟ್‌ಗಳ ಶ್ರೇಣಿಯನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಈ ಪ್ರಚಾರವು ಎಸ್‌ಆರ್‌ಕೆ ಅವರನ್ನು ಸ್ವತಃ ಅವರಾಗಿಯೇ ತೋರಿಸಿ, ಒಂದು ಬ್ರ್ಯಾಂಡ್ ನಿಜವಾಗಿಯೂ ಅವರಿಗೆ ಪ್ರಯೋಜನಕಾರಿಯಾಗಿರುವಂತಹ ಅವರ ಜೀವನದ ಒಂದು ತುಣುಕನ್ನು ತೋರಿಸುತ್ತದೆ.” ಎಂದು ಹೇಳಿದ, ಕ್ಯಾಸ್ಟ್ರಾಲ್ ಇಂಡಿಯಾ ಲಿಮಿಟೆಡ್‌ನ ಉಪಾಧ್ಯಕ್ಷ ಹಾಗೂ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಶ್ರೀ ರೋಹಿತ್ ತಳವಾರ್ ಅವರು ಮುಂದುವರಿದು, “ಕ್ಯಾಸ್ಟ್ರಾಲ್ ಎಡ್ಜ್‌ನ ಪರಿಚಯದೊಂದಿಗೆ, ಆವಿಷ್ಕಾರದ ಮೇಲಿನ ನಮ್ಮ ಗಮನಕೇಂದ್ರೀಕರಣವು, ತಮ್ಮ ಕಾರುಗಳಿಂದ ಇನ್ನಷ್ಟು ಉತ್ತಮ ಕಾರ್ಯಕ್ಷಮತೆಯನ್ನು ಬಯಸುತ್ತಿರುವ ಭಾರತದ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಹೊಸ ಕ್ಯಾಸ್ಟ್ರಾಲ್ ಎಡ್ಜ್ ಶ್ರೇಣಿಯು, ಹೈಬ್ರಿಡ್‌ಗಳಿಂದ ಹಿಡಿದು ಐರೋಪ್ಯ ಕಾರುಗಳು ಹಾಗು ಎಸ್‌ಯುವಿಗಳವರೆಗೆ ವಿವಿಧ ಶ್ರೇಣಿಯ ವಾಹನಗಳಿಗಾಗಿಯೇ ನಿರ್ದಿಷ್ಟವಾಗಿ ಇಂಜಿನಿಯರ್ ಮ್ಡಲಾಗಿರುವ ಉತ್ಪನ್ನಗಳನ್ನು ಹೊಂದಿದ್ದು, ಅತ್ಯುನ್ನತ ಉದ್ಯಮ ಮಾನದಂಡಗಳ ಅಗತ್ಯವನ್ನು ಮೀರುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುತ್ತದೆ. ಈ ಪರಿಚಯವ್, ಲೂಬ್ರಿಕೆಂಟ್ ಕ್ಷೇತ್ರದಲ್ಲಿ ನಮ್ಮ ನಾಯಕತ್ವ ಸಾಮರ್ಥ್ಯಗಳನ್ನು ಮರುಖಾತರಿ ಪಡಿಸುತ್ತದೆ ಮತ್ತು ಕ್ಯಾಸ್ಟ್ರಾಲ್ ಎಡ್ಜ್ ಇಂಜಿನ್ ಕಾರ್ಯಕ್ಷಮತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿ ವ್ಯಾಪಾರ ಬೆಳವಣಿಗೆಯನ್ನು ವರ್ಧಿಸುತ್ತದೆ ಎಂಬ ವಿಶ್ವಾಸ ನಮಗಿದೆ.” ಎಂದು ಹೇಳಿದರು.
ಟಿವಿಸಿಯ ರಚನೆಯ ಕುರಿತು ಚರ್ಚಿಸುತ್ತಾ, ಓಗಿಲ್ವಿ ಇಂಡಿಯಾ(Ogilvy India)ಸಿಸಿಒ ಸುಕೇಶ್ ನಾಯಕ್, “ಕ್ಯಾಸ್ಟ್ರಾಲ್‌ನೊಂದಿಗೆ ನಾವು ಏನಾದರೂ ಅದ್ಭುತವಾದುದನ್ನು ಮಾಡಬೇಕಿತ್ತು. ಎಸ್‌ಆರ್‌ಕೆ ಅವರನ್ನು ತಂಡದಲ್ಲಿ ಸೇರಿಸಿಕೊಂಡು ಅವರ ಸಾಮರ್ಥ್ಯವನ್ನು ಸೃಜನಶೀಲವಾಗಿ ಗರಿಷ್ಟಗೊ ಳಿಸಲು ಬಯಸಿದ್ದೆವು. ನಂತರ ನಮಗೆ ನಾವೇ ಒಂದು ಪ್ರಶ್ನೆ ಹಾಕಿಕೊಂಡೆವು”ಎಸ್‌ಆರ್‌ಕೆ ಅವರಿಗೆ ಬೇಡಿಕೆಯ ಮೇಲಿನ ಕಾರ್ಯಕ್ಷಮತೆಯ ಅಗತ್ಯವೇನು?” ಹೀಗೆ “ಸ್ಟೇ ಅಹೆಡ್”ಹುಟ್ಟಿಕೊಂಡಿತು. ಇದು ಕೇವಲ ಒಂದು ಟಿವಿಸಿ ಅಲ್ಲ, ಇದೊಂದು, ಮೋಜಿನ ಸಂದರ್ಭಗಳಿರುವ, ಹಿಂದೆಂದೂ ಕಾಣದ ಎಸ್‌ಆರ್‌ಕೆ ಅವರ ಪ್ರಪ್ರಥಮ ಇಮೇಜ್ ಗ್ಯಾಲರಿಯ, ರೋಲರ್ ಕೋಸ್ಟರ್ ಚೇಸ್ ಹಾಗೂ ಗ್ರಾಹಕರನ್ನು ಖಂಡಿತವಾಗಿಯೂ ತಲ್ಲೀನಗೊಳಿಸುವ ಕಚಗುಳಿ ಇಡುವಂತಹ ಹಾಸ್ಯ ತುಂಬಿರುವ ಒಂದು ಪೂರ್ಣಪ್ರಮಾಣದ ಪ್ರಚಾರವಾಗಿದೆ.” ಎಂದು ಹೇಳಿದರು.
“ಕ್ಯಾಸ್ಟ್ರಾಲ್ ಮತ್ತು ಎಸ್‌ಆರ್‌ಕೆ, ವಿವಿಧ ಪ್ರೇಕ್ಷಕ ವರ್ಗಗಳು ಹಾಗೂ ಭೌಗೋಳಿಕ ಪ್ರದೇಶಾಗಳಾದ್ಯಂತ ಪ್ರತಿಸ್ಪಂದಿಸುವ ಸಂದರ್ಭದಲ್ಲೇ ಅದ್ಭುತ ಅಪೀಲ್ ಇರುವ ಎರಡು ಐತಿಹಾಸಿಕ ಬ್ರ್ಯಾಂಡ್‌ಗಳ ಸಂಗಮವಾಗಿದೆ. ಈ ಬ್ಲಾಕ್‌ಬಸ್ಟರ್ ಪ್ರಚಾರಕ್ಕಾಗಿ ಕೊಡುಗೆ ಸಲ್ಲಿಸುತ್ತಿರುವುದಕ್ಕೆ ನಮಗೆ ಬಹಳ ಹೆಮ್ಮೆಯಾಗುತ್ತಿದೆ.” ಎಂದು ಹೇಳಿದರು, ಮೈಂಡ್‌ಶೇರ್ ಸೌತ್ ಏಶ್ಯಾದ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಅಮಿನ್ ಲಖಾನಿ.
ಈ ಪ್ರಚಾರವು, ಪಾಪಾರಾಝಿಗೆ ಎಸ್‌ಆರ್‌ಕೆ ಅವರ ಹಿಂದೆಂದೂ ಕಾಣದ ಪ್ರಪ್ರಥಮ ಅಗತ್ಯಕ್ಕೆ ತಕ್ಕ ಫೋಟೋ ಗ್ಯಾಲರಿ ಒದಗಿಸುವ ಮೂಲಕ ಒಂದು ಲೂಪ್‌ಅನ್ನು ಕೂಡ ಮುಚ್ಚಿಬಿಡುತ್ತದೆ. ಎಸ್‌ಆರ್‌ಕೆ ಅವರು ತಮ್ಮ ಕಾರಿನಲ್ಲಿ ಕ್ಯಾಸ್ಟ್ರಾಲ್ ಎಡ್ಜ್‌ನೊಂದಿಗೆ ಎಲ್ಲರಿಗಿಂತ ಮುಂದಿರುವಂತೆ(ಸ್ಟೇ ಅಹೆಡ್), ಪಾಪಾರಾಝಿಗೆ ಈಗ ಈ ಚಿತ್ರಗಳಿಗೆ ಉಚಿತ ಪ್ರವೇಶಾವಕಾಶ ಮತ್ತು ಬಳಕೆಯ ಅವಕಾಶ ಸಿಗುತ್ತದೆ(ಹೈಪರ್‌ಲಿಂಕ್ ಇಲ್ಲಿದೆ)
ಹೊಚ್ಚ ಹೊಸ ಕ್ಯಾಸ್ಟ್ರಾಲ್ ಎಡ್ಜ್, ಕಠಿಣವಾದ ಉದ್ಯಮ ಮಿತಿಗಳ ನಡುವೆ ಕನಿಷ್ಟ 30%1 ಸುಧಾರಿತ ಕಾರ್ಯಕ್ಷಮತೆ ನೀಡುವುದಕ್ಕಾಗಿ ರಚಿಸಲಾಗಿದೆ. ಇತ್ತೀಚಿನ ವಿನಿರ್ದೇಶನಗಳನ್ನು ಪೂರೈಸುವುದಕ್ಕಾಗಿ ವಿನ್ಯಾಸಗೊಳಿಸಿ ಪರೀಕ್ಷಿಸಲಾಗಿರುವ ಇಡೀ ಶ್ರೇಣಿಯ ಪವರ್‌ಬೂಸ್ಟ್ ಟೆಕ್ನಾಲಜಿ(PowerBoost TechnologyTM), ಚಾಲಕರಿಗೆ ಅತ್ಯಗತ್ಯವಾದಾಗ, ಹೆಚ್ಚು ಶಕ್ತಿ ಮತ್ತು ವೇಗವರ್ಧನೆ ಪಡೆದುಕೊಳ್ಳುವ 2 ಆತ್ಮವಿಶ್ವಾಸ ಒದಗಿಸುತ್ತದೆ.
ಈ ಪರಿಚಯವು, ಹೈಬ್ರಿಡ್ ಇಂಜಿನ್‌ಗಾಗಿಯೇ ವಿಶೇಷವಾಗಿ ರಚಿಸಲಾಗಿರುವ ಎಡ್ಜ್ ಹೈಬ್ರಿಡ್(EDGE Hybrid), ಆಡಿ, ಬಿಎಮ್‌ಡಬ್ಲ್ಯು, ಮರ್ಸಿಡಿಸ್, ಜಾಗ್ವಾರ್, ಲ್ಯಾಂಡ್ ರೋವರ್, ವೋಕ್ಸ್‌ವೇಗನ್, ಸ್ಕೋಡಾ ಹಾಗೂ ಪೋರ್ಶ್ ಮುಂತಾದ ಮುಂಚೂಣಿ ಯೂರೋ OEMSಗಳನ್ನು ಗುರಿಯಿರಿಸಿದ ಎಡ್ಜ್ ಯೂರೋ ಕಾರ್(EDGE Euro Car) ಹಾಗೂ ಅಧಿಕ ಕಾರ್ಯಕ್ಷಮತೆ ಮತ್ತು ಪ್ರೀಮಿಯಮ್ ಎಸ್‌ಯುವಿಗಳಿಗಾಗಿ ಎಡ್ಜ್ ಎಸ್‌ಯುವಿ(EDGE SUV) ಮುಂತಾದವನ್ನು ಒಳಗೊಂಡಿದೆ.
ಟಿ20 ವಿಶ್ವಕಪ್ ಜೊತೆಗೆ, ಕ್ಯಾಸ್ಟ್ರಾಲ್ ಜುಲೈ 2024ನಲ್ಲಿ ವಿಂಬಲ್ಡನ್‌ಗಾಗಿ ಡಿಸ್ನಿ ಸ್ಟಾರ್‌ನಲ್ಲಿ ಸಹಪ್ರಾಯೋಜಕ ಸಂಸ್ಥೆಯೂ ಆಗಿದೆ. ಪರಿಚಯ(ಟೀಸರ್) ವೀಡಿಯೋ, ಮುದ್ರಣ, ಡಿಜಿಟಲ್, ಪ್ರಭಾವಕ ವರ್ಧನೆ ಹಾಗೂ ಒಒಎಚ್(OOH) ಒಳಗೊಂಡಂತೆ,ವಿವಿಧ ವೇದಿಕೆಗಳಾದ್ಯಂತ ಸಂಪೂರ್ಣವಾದ 360-ಡಿಗ್ರಿಗಳ ಮಾರ್ಕೆಟಿಂಗ್ ಪ್ರಚಾರದ ಭಾಗವಾಗಿ, ವೈವಿಧ್ಯಮಯವಾದ ಪ್ರೇಕ್ಷಕರೊಡನೆ ಪ್ರತಿಧ್ವನಿಸುವಂತೆ ಮಾಡುವ ಸಲುವಾಗಿ ಟಿವಿಸಿಯನ್ನು ಏಳು ಭಾಷೆಗಳಲ್ಲಿ ಜೂನ್ 9ರಂದು ಬಿಡುಗಡೆ ಮಾಡಲಾಗಿದೆ.