Wednesday, 11th December 2024

ಕಚೇರಿಗಳಲ್ಲಿ ಜೀನ್ಸ್, ಟಿ-ಶರ್ಟ್‌ ಬಟ್ಟೆ ಧರಿಸಬೇಡಿ: ಬಿಹಾರ ಸರ್ಕಾರ

ಪಾಟ್ನಾ: ಕೆಲಸದ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ-ಶರ್ಟ್‌ಗಳಂತಹ ಕ್ಯಾಶುಯಲ್ ಬಟ್ಟೆಗಳನ್ನು ಧರಿಸಬೇಡಿ ಎಂದು ಬಿಹಾರ ಸರ್ಕಾರವು ರಾಜ್ಯ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ತಿಳಿಸಿದೆ.

ಶಿಕ್ಷಣ ಇಲಾಖೆ ನಿರ್ದೇಶಕರು (ಆಡಳಿತ) ಹೊರಡಿಸಿದ ಆದೇಶದಲ್ಲಿ ಟಿ-ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಚೇರಿಗಳಿಗೆ ಬರುವ ನೌಕರ ರಿಗೆ ಈ ಸೂಚನೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಕಚೇರಿ ಸಂಸ್ಕೃತಿಗೆ ವ್ಯತಿರಿಕ್ತ ಉಡುಗೆ ತೊಡುಗೆ ಧರಿಸಿ ಕಚೇರಿಗೆ ಬರುತ್ತಿರು ವುದು ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಅಥವಾ ಇತರೆ ನೌಕರರು ಕಚೇರಿಯಲ್ಲಿ ಕ್ಯಾಶುವಲ್ ಧರಿಸುವುದು ಕಚೇರಿಯಲ್ಲಿ ಕೆಲಸ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.

ಆದ್ದರಿಂದ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಶಿಕ್ಷಣ ಇಲಾಖೆ ಕಚೇರಿಗಳಿಗೆ ಫಾರ್ಮಲ್ ಡ್ರೆಸ್‌ಗಳಲ್ಲಿ ಮಾತ್ರ ಬರಬೇಕು. ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಯಾವುದೇ ಕ್ಯಾಶುಯಲ್ ಉಡುಗೆಗಳನ್ನು ವಿಶೇಷವಾಗಿ ಜೀನ್ಸ್ ಮತ್ತು ಟಿ-ಶರ್ಟ್‌ಗಳನ್ನು ತಕ್ಷಣ ದಿಂದ ಜಾರಿಗೆ ಬರುವಂತೆ ಅನುಮತಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರನ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಏಪ್ರಿಲ್‌ನಲ್ಲಿ ಎಲ್ಲಾ ಸರ್ಕಾರಿ ನೌಕರರು ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ-ಶರ್ಟ್‌ ಗಳನ್ನು ಧರಿಸುವುದನ್ನು ನಿರ್ಬಂಧಿಸಿದ್ದರು.

ಔಪಚಾರಿಕ ಉಡುಪುಗಳನ್ನು ಧರಿಸಲು ಮತ್ತು ಗುರುತಿನ ಚೀಟಿಗಳನ್ನು ಹೊಂದಲು ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಬಿಹಾರ ಸರ್ಕಾರವು 2019 ರಲ್ಲಿ ರಾಜ್ಯ ಸಚಿವಾಲಯದಲ್ಲಿ ನೌಕರರ ಶ್ರೇಣಿಯನ್ನು ಲೆಕ್ಕಿಸದೆ ಜೀನ್ಸ್ ಮತ್ತು ಟಿ-ಶರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಿತ್ತು.