Wednesday, 11th December 2024

ಸಿಬಿಐ, ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ

ನವದೆಹಲಿ: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾ ವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಸರಕಾರ ಸುಗ್ರೀವಾಜ್ಞೆ ತಂದಿದೆ.

ಎರಡೂ ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಪ್ರಸ್ತುತ ಎರಡು ವರ್ಷಗಳ ಅಧಿಕಾರಾವಧಿ  ಹೊಂದಿದ್ದಾರೆ. ಉನ್ನತ ಏಜೆನ್ಸಿಗಳ ಮುಖ್ಯಸ್ಥರು ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಪ್ರತಿ ವರ್ಷ ಮೂರು ವರ್ಷಗಳವರೆಗೆ ಸುಗ್ರೀವಾ ಜ್ಞೆಯ ಪ್ರಕಾರ ವಿಸ್ತರಣೆಗಳನ್ನು ನೀಡಬಹುದು.

ನ್ಯಾಯಮೂರ್ತಿ ಎಲ್‌.ಎನ್. ರಾವ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಇತ್ತೀಚೆಗೆ ಜಾರಿ ನಿರ್ದೇಶನಾಲಯ ನಿರ್ದೇಶಕ ಎಸ್‌ಕೆ ಮಿಶ್ರಾ ಅವರ ವಿಸ್ತರಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ನೀಡಿದ್ದು, “ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಿಸ್ತರಣೆಗಳನ್ನು ನೀಡಬೇಕು” ಎಂದು ಹೇಳಿತ್ತು.