Saturday, 14th December 2024

ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ನಾಳೆ ಪ್ರಕಟ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು ನಾಳೆ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟಿಸಲಿದ್ದಾರೆ.

ಡಿ.10, 16 ಮತ್ತು 22ರಂದು ಮೂರು ದಿನಗಳ ಕಾಲ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜತೆ ಆನ್‍ಲೈನ್‍ನಲ್ಲಿ ಸಮಾ ಲೋಚನೆ ನಡೆಸಿರುವ ಸಚಿವರು, ನಾಳೆ ಸಂಜೆ 6 ಗಂಟೆಗೆ ನಡೆಯುವ ಮತ್ತೊಂದು ಸುತ್ತಿನ ಟ್ವಿಟರ್ ಲೈವ್ ಡಿಸ್ಕಷನ್‍ನಲ್ಲಿ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದಾರೆ.

ಲೈವ್ ಡಿಸ್ಕಷನ್‍ನಲ್ಲಿ ಬಹಳಷ್ಟು ಮಂದಿ ವಿದ್ಯಾರ್ಥಿಗಳು, ಸರಿಯಾಗಿ ಆನ್‍ಲೈನ್ ಕ್ಲಾಸ್‍ಗಳು ನಡೆದಿಲ್ಲ. ಶಾಲೆಗಳು ತೆರೆದಿಲ್ಲ. ಪಾಠ ಪ್ರವಚನಗಳು ಮುಗಿದಿಲ್ಲ. ಹೀಗಾಗಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು. ಆದರೆ, ಸಚಿವರು ಮಣೆ ಹಾಕಿಲ್ಲ. ಪಠ್ಯ ಕ್ರಮ ಕಡಿತ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಶಿಕ್ಷಕರ ಜತೆ ಸಚಿವರು ಸಮಾಲೋಚನೆ ನಡೆಸಿದ್ದಾರೆ.

ಅಂತಿಮವಾಗಿ ನಾಳೆ ಸಂಜೆ ಸಚಿವರು ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.