Saturday, 14th December 2024

‘ಮಾತೃಭೂಮಿ’ ಪತ್ರಿಕೆ ಶತಮಾನೋತ್ಸವ: ನಾಳೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇರಳದ ಮಲಯಾಳಂ ಪತ್ರಿಕೆ ‘ಮಾತೃಭೂಮಿ’ಯ ಶತಮಾನೋ ತ್ಸವ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

1923ರ ಮಾರ್ಚ್ 18ರಂದು ಆರಂಭವಾದ ಈ ಪತ್ರಿಕೆ ಸಾಮಾಜಿಕ ಸುಧಾರಣೆ ಮತ್ತು ಅಭಿವೃದ್ಧಿ ಪರವಾದ ಕಾರ್ಯಸೂಚಿ ಯನ್ನು ಬೆಂಬಲಿಸುತ್ತಿದೆ. ರಾಷ್ಟ್ರೀಯ ಹಿತಾಸಕ್ತಿ ಯಂತಹ ವಿಚಾರಗಳಿಗೆ ಮಹತ್ವ ನೀಡುತ್ತಿದೆ ಎಂದು ಪತ್ರಿಕೆ ಹೇಳಿದೆ.

ಸದ್ಯ 15 ಆವೃತ್ತಿಗಳನ್ನು ಹೊಂದಿರುವ ಮಾತೃಭೂಮಿ ಪತ್ರಿಕೆ, 11 ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ.