Friday, 13th December 2024

ಜನವರಿ 10ರವರೆಗೆ ಕೊಚ್ಚರ್ ದಂಪತಿಗೆ ನ್ಯಾಯಾಂಗ ಬಂಧನ

ಮುಂಬೈ: ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್, ಅವರ ಪತಿ ದೀಪಕ್‌ ಕೊಚ್ಚರ್ ಮತ್ತು ವಿಡಿಯೊಕಾನ್‌ ಸಮೂಹದ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕೊಚ್ಚರ್ ದಂಪತಿಯನ್ನು ಕಳೆದ ಶುಕ್ರವಾರ ಹಾಗೂ ವೇಣುಗೋಪಾಲ್ ಅವರನ್ನು ಸೋಮವಾರ ಸಿಬಿಐ ಬಂಧಿಸಿತ್ತು.

2019ರಲ್ಲಿ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಕೊಚ್ಚರ್ ದಂಪತಿ, ವಿಡಿಯೊಕಾನ್‌ ಸಂಸ್ಥೆಯ ಸ್ಥಾಪಕ ವೇಣುಗೋಪಾಲ್ ಧೂತ್, ದೀಪಕ್‌ ನಿರ್ವಹಿಸುತ್ತಿರುವ ನೂಪವರ್‌ ರಿನೀವಬಲ್, ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್, ವಿಡಿಯೊಕಾನ್‌ ಇಂಟರ್‌ ನ್ಯಾಷನಲ್ ಎಲೆಕ್ಟ್ರಾನಿಕ್ಸ್, ವಿಡಿಯೊಕಾನ್ ಇಂಡಸ್ಟ್ರೀಸ್‌ ಅನ್ನು ಸಿಬಿಐ ಹೆಸರಿಸಿತ್ತು.