Saturday, 14th December 2024

Chandrababu Naidu: ಹೈಸ್ಪೀಡ್‌ ರೈಲಿನಿಂದ ಕೂದಲೆಳೆಯಂತರದಲ್ಲಿ ಪಾರಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

chandrababu naidu

ಹೈದರಾಬಾದ್: ಪ್ರವಾಹಪೀಡಿತ (Flood) ಪ್ರದೇಶದ ವೀಕ್ಷಣೆ ನಡೆಸುತ್ತಿದ್ದ ವೇಳೆ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು (Andhra Pradesh CM Chandrababu Naidu), ಕೂದಲೆಳೆಯಂತರದಲ್ಲಿ ರೈಲು ಅಪಘಾತದಿಂದ (Train Accident) ಪಾರಾಗಿದ್ದಾರೆ.

ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ತಂಡ ರೈಲ್ವೇ ಹಳಿಯೊಂದರ ಪಕ್ಕ ಜಲಾವೃತಗೊಂಡಿದ್ದ ಪ್ರದೇಶವನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ರೈಲ್ವೆ ಹಳಿಯ ಮೇಲೆ ರೈಲು ಬಂದಿದೆ. ಆ ವೇಳೆ ಪಕ್ಕದಲ್ಲಿಯೇ ಇದ್ದ ಸಿಎಂ ಚಂದ್ರಬಾಬು ನಾಯ್ಡು ಅಪಘಾತದಿಂದ ಪಾರಾಗಿದ್ದಾರೆ.

ನಾಯ್ಡು ಮತ್ತು ತಂಡ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡುತ್ತಿದ್ದಾಗ ರೈಲು ವಿರುದ್ಧ ದಿಕ್ಕಿನಿಂದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಮೀಪಿಸಿತು. ಆಗ ಅವರ ಜೊತೆಗಿದ್ದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ರೈಲು ಮಾರ್ಗದಿಂದ ತ್ವರಿತವಾಗಿ ಹಿಂದೆ ಸರಿದಿದ್ದರಿಂದ ದುರಂತವೊಂದು ತಪ್ಪಿತು. ರೈಲು ಹಾದುಹೋದ ನಂತರ, ಆ ತಂಡವು ತಮ್ಮ ತಪಾಸಣೆಯನ್ನು ಮುಂದುವರೆಸಿತು.

ಸಿಎಂ ಚಂದ್ರಬಾಬು ನಾಯ್ಡು ಅವರು ಕಳೆದ ಕೆಲವು ದಿನಗಳಿಂದ ವಿಜಯವಾಡದಲ್ಲಿಯೇ ಉಳಿದುಕೊಂಡಿದ್ದು, ನಗರ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ಪ್ರಯತ್ನಗಳು ಮುಂದುವರಿದಿವೆ.

ವಿಜಯವಾಡದಲ್ಲಿ ಭಾನುವಾರವೊಂದರಲ್ಲೇ 37 ಸೆಂ.ಮೀ ಮಳೆ ಸುರಿದಿದ್ದು, ಬುಡಮೇರು ನದಿ ಉಕ್ಕಿ ಹರಿಯಲು ಕಾರಣವಾಗಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಹುಟ್ಟುವ ಈ ನದಿಯು ಒಡ್ಡು ಒಡೆದು ಭಾರಿ ಪ್ರವಾಹಕ್ಕೆ ಕಾರಣವಾಗಿದೆ. ಇದರಿಂದ ರಕ್ಷಣಾ ತಂಡಗಳಿಗೆ ಜನರನ್ನು ತಲುಪಲು ಕಷ್ಟವಾಗುತ್ತಿದೆ. ಈ ಪ್ರವಾಹವು 2005ರ ವಿಜಯವಾಡ ಪ್ರವಾಹಕ್ಕಿಂತ ಭೀಕರವಾಗಿದೆ ಎಂದು ವಿವರಿಸಲಾಗಿದೆ.

ಈ ಸುದ್ದಿ ಓದಿ: Chandrababu Naidu: ಆಂಧ್ರಪ್ರದೇಶದ ದೇವಾಲಯಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ: ಸಿಎಂ ಚಂದ್ರಬಾಬು ನಾಯ್ಡು ಘೋಷಣೆ