ಚೆನ್ನೈ (ತಮಿಳುನಾಡು): ರಾಜ್ಯದ ಚೆನ್ನೈನ ಅವಡಿ ರೈಲು ನಿಲ್ದಾಣದ ಬಳಿ ವಿದ್ಯುತ್ ಚಾಲಿತ ಹಳಿ ತಪ್ಪಿದೆ.
ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ರೈಲ್ವೆ ಹಳಿ ಬಿರುಕು ಬಿಟ್ಟಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ತಿರುವಳ್ಳೂರಿನಿಂದ ಪುರಟ್ಚಿ ತಲೈವರ್ ಡಾ. ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣದವರೆಗೆ ರೈಲ್ವೆ ಹಳಿಯ (ಟ್ರ್ಯಾಕ್) ನಿರ್ವಹಣಾ ಕಾರ್ಯ ನಡೆಯುತ್ತಿದೆ. ಈ ವೇಳೆ, ಬೆಳಗ್ಗೆ ತಿರುವಳ್ಳೂರಿನಿಂದ ತಿರುಟ್ಟಣಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ರೈಲು ಅಣ್ಣನೂರಿನಿಂದ ಅವಡಿ ತಲುಪಿದ ಬಳಿಕ ಅವಘಡ ಸಂಭವಿಸಿದೆ. ಈ ರೈಲಿನಲ್ಲಿ 4 ಬೋಗಿಗಳು ಹಳಿ ತಪ್ಪಿವೆ.
ರಜಾದಿನವಾದ ಕಾರಣ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಿಂದಾಗಿ ಅವಡಿ -ಚೆನ್ನೈ ಮಾರ್ಗವಾಗಿ ತೆರಳುವ ರೈಲುಗಳು, ವಂದೇ ಭಾರತ್ ಸೇರಿದಂತೆ ಇತರ ಎಲೆಕ್ಟ್ರಿಕ್ ರೈಲುಗಳು, ಒಟ್ಟಾರೆಯಾಗಿ ರೈಲು ಸೇವೆಗಳ ಸಂಚಾರಕ್ಕೆ ತೊಂದರೆಯಾಗಿದೆ.
ಸದ್ಯ ರೈಲು ಭೋಗಿಗಳ ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಕೈಗೊಂಡಿದೆ.