Friday, 13th December 2024

ಎಸ್​ಯುವಿ ಕಾರಿಗೆ ಟ್ರಕ್​ ಡಿಕ್ಕಿ: 11 ಜನ ದಾರುಣ ಸಾವು

ಛತ್ತೀಸ್​ಗಢ್: ಎಸ್​ಯುವಿ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದು 11 ಜನ ದಾರುಣವಾಗಿ ಮೃತ ಪಟ್ಟಿದ್ದಾರೆ.

ಬಾಲೋಡ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಟ್ರಕ್​ ಡಿಕ್ಕಿ ಹೊಡೆದ ರಭಸಕ್ಕೆ ಎಸ್​ಯುವಿ ಕಾರಿನಲ್ಲಿ ಇದ್ದ ಎಲ್ಲರೂ ಮೃತ ಪಟ್ಟಿದ್ದಾರೆ. ಅದರಲ್ಲಿ 10 ಮಂದಿ ಸ್ಥಳದಲ್ಲೇ ಸತ್ತಿದ್ದು, ಮಗು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜೀವವೂ ಹೋಗಿದೆ.

ಎಸ್​ಯುವಿ ಕಾರಿನಲ್ಲಿ ಇದ್ದವರೆಲ್ಲ ಧಮ್ತರಿ ಜಿಲ್ಲೆಯ ಸೋರಮ್​-ಭಟ್​​ಗಾಂವ್​ ಹಳ್ಳಿಯ ವರು. ಇವರು ಕಂಕೇರ್​ ಜಿಲ್ಲೆಯ ಮರ್ಕ್​ಟೋಲಾ ಎಂಬ ಊರಿಗೆ, ಮದುವೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲೆಂದು ತೆರಳುತ್ತಿದ್ದರು.

ಜಾಗ್ತಾರಾ ಎಂಬ ಗ್ರಾಮದ ಬಳಿ ಅವರ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದಿದೆ ಎಂದು ಪೂರೂರ್​ ಪೊಲೀಸ್ ಠಾಣೆ ಅಧಿಕಾರಿ  ಸಹು ತಿಳಿಸಿದ್ದಾರೆ. ಅಪಘಾತವಾಗುತ್ತಿದ್ದಂತೆ ಟ್ರಕ್​ ಡ್ರೈವರ್ ನಾಪತ್ತೆಯಾಗಿದ್ದಾನೆ. ಅವನನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾ ಚರಣೆ ನಡೆಸುತ್ತಿದ್ದಾರೆ.