ರಾಯ್‍ಪುರ: ಛತ್ತೀಸ್‍ಗಢ ವಿಧಾನಸಭೆ ಚುನಾವಣೆಯಲ್ಲಿ ಸೋತ ಕೆಲವೇ ದಿನಗಳ ನಂತರ ಕಾಂಗ್ರೆಸ್ ತನ್ನ ಇಬ್ಬರು ಮಾಜಿ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ಮಾಜಿ ಸಚಿವರೊಬ್ಬರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 7 ಮತ್ತು 17 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ 90 ಸದಸ್ಯ ಬಲದ ಸದನದಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿತು. ಆದರೆ ಕಾಂಗ್ರೆಸ್ 2018 ರ ಆವೃತ್ತಿಯಲ್ಲಿ ಗೆದ್ದ 68 ಸ್ಥಾನಗಳಿಂದ 35 ಸ್ಥಾನಗಳಿಗೆ ಕುಸಿದಿತ್ತು.
ಕಾಂಗ್ರೆಸ್ ಶಾಸಕರಾದ ಬೃಹಸ್ಪತ್ ಸಿಂಗ್ ಮತ್ತು ಡಾ ವಿನಯ್ ಜೈಸ್ವಾಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಆರು ವರ್ಷಗಳ ಅವಗೆ ಉಚ್ಚಾಟಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
2023 ರ ಅಸೆಂಬ್ಲಿ ಚುನಾವಣೆಯಲ್ಲಿ ಸಿಂಗ್ ಮತ್ತು ಜೈಸ್ವಾಲ್ ಅವರಿಗೆ ಟಿಕೆಟ್ ನೀಡಿರಲಿಲ್ಲ ಮತ್ತು ಚುನಾವಣಾ ಸೋಲಿನ ನಂತರ ಇಬ್ಬರು ಪಕ್ಷದ ಹಿರಿಯ ನಾಯಕರ ಅವರ ವಿರುದ್ಧ ಹಲವಾರು ಗುರುತರ ಆರೋಪಗಳನ್ನು ಹೊರಿಸಿದ್ದರು.