Saturday, 14th December 2024

Clove Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ಜಗಿದರೆ ಎಷ್ಟೆಲ್ಲ ಪ್ರಯೋಜನವಿದೆ ನೋಡಿ!

Clove Benefits

ಭಾರತೀಯರ ಅಡುಗೆ ಮನೆಯಲ್ಲಿರುವ ಮಸಾಲಾ ಪದಾರ್ಥಗಳಲ್ಲಿ ಔಷಧೀಯ ಗುಣಗಳಿವೆ. ಹಾಗಾಗಿ ಅವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮಸಾಲೆಗಳಲ್ಲಿ ಲವಂಗ (Clove Benefits) ಕೂಡ ಒಂದಾಗಿದೆ. ಲವಂಗವು ಸಣ್ಣದಾಗಿ ಕಾಣಬಹುದು. ಆದರೆ ಅದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಸೇವಿಸುವ ಮೂಲಕ ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

Clove Benefits

ಲವಂಗದಲ್ಲಿ ಜೀವಸತ್ವಗಳು, ಫೈಬರ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳಿವೆ. ಈ ಲವಂಗವು ಅನೇಕ ರೀತಿಯ ರೋಗಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಲಿವರ್ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ದೇಹದಿಂದ ತ್ಯಾಜ್ಯಗಳನ್ನು ಹೊರಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲಿವರ್‍ ಆರೋಗ್ಯಕರವಾಗಿ ಉಳಿಯುವುದು ಬಹಳ ಮುಖ್ಯ. ಲವಂಗವನ್ನು ನಿಯಮಿತವಾಗಿ ಸೇವಿಸಿದರೆ ಅದು ನಿಮ್ಮ ಲಿವರ್‌ ಅನ್ನು ಆರೋಗ್ಯಕರವಾಗಿರಿಸುತ್ತದೆ. 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ:

ಲವಂಗದಲ್ಲಿ ವಿಟಮಿನ್ ಸಿ ಹೆಚ್ಚಿನ ಮಟ್ಟದಲ್ಲಿ ಕಂಡುಬರುತ್ತದೆ ಮತ್ತು ಇದು ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಇದು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

Clove Benefits

ಹಲ್ಲುನೋವಿಗೆ ಪರಿಹಾರ:

ಹಲ್ಲುಗಳಲ್ಲಿ ನೋವು ಇದ್ದರೆ  ಲವಂಗವನ್ನು ಬಳಸಿ. ಲವಂಗವು ನೋವು ನಿವಾರಕ ಗುಣಗಳನ್ನು ಹೊಂದಿದ್ದು, ಇದು ಹಲ್ಲುನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ನಿಮಗೆ ತಲೆನೋವು ಇದ್ದರೆ ಮತ್ತು ಲವಂಗದ ಎಣ್ಣೆಯ ವಾಸನೆ ತೆಗೆದುಕೊಂಡರೆ ತಲೆ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಒಸಡುಗಳಲ್ಲಿ ಸೋಂಕು ಇದ್ದರೆ, ನೀವು ಅದರಿಂದ ಬಾಯಿಯನ್ನು ಸಹ ತೊಳೆಯಬಹುದು.

ಬಾಯಿಯಿಂದ ವಾಸನೆಯನ್ನು ತೆಗೆದುಹಾಕಿ:

ಲವಂಗವು ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಸಹ ತೆಗೆದುಹಾಕುತ್ತದೆ. ಬಾಯಿಯ ವಾಸನೆಯನ್ನು ತೆಗೆದುಹಾಕಲು ಜನರು ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ, ಆದರೆ ಲವಂಗದಿಂದ ನೈಸರ್ಗಿಕವಾಗಿ ಬಾಯಿಯ ವಾಸನೆಯನ್ನು ತೆಗೆದುಹಾಕಬಹುದು. 

ಮೂಳೆಗಳನ್ನು ಬಲಪಡಿಸಿ:

ಲವಂಗವು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಮೂಳೆಗಳು ದುರ್ಬಲವಾಗಿದ್ದರೆ ನೀವು ಬೆಳಿಗ್ಗೆ ಎದ್ದು ಲವಂಗದ ಎರಡು ಮೊಗ್ಗುಗಳನ್ನು ಜಗಿಯಬೇಕು. ಲವಂಗದಲ್ಲಿ ಮ್ಯಾಂಗನೀಸ್ ಪ್ರಮಾಣವೂ ತುಂಬಾ ಇರುವುದರಿಂದ, ಇದು ಮೂಳೆಗಳನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ನವರಾತ್ರಿಯ ಶುಭ ದಿನಗಳಲ್ಲಿ ಮೊದಲಿಗೆ ಪೂಜಿಸುವ ‘ಶೈಲಪುತ್ರಿ’ಯ ಬಗ್ಗೆ ತಿಳಿದುಕೊಳ್ಳೋಣ…

ಈ ರೀತಿಯಲ್ಲಿ ನಿಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಲವಂಗವನ್ನು ಬಳಸಿಕೊಂಡು ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಿಕೊಳ್ಳುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.