Saturday, 23rd November 2024

ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಕ್ಯಾಂಪಸ್ ಉದ್ಘಾಟನೆ ಇಂದು

ಕೊಲ್ಕತ್ತಾ: ಶುಕ್ರವಾರ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (CNCI) ಎರಡನೇ ಕ್ಯಾಂಪಸ್ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.

ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ನವೀಕರಿಸಲು ಪಿಎಂ ಮೋದಿ ಅವರ ದೃಷ್ಟಿಗೆ ಅನುಗುಣವಾಗಿ ಸಿಎನ್‌ಸಿಐನ ಎರಡನೇ ಕ್ಯಾಂಪಸ್ ಅನ್ನು ನಿರ್ಮಿಸ ಲಾಗಿದೆ.

ಕ್ಯಾನ್ಸರ್ ರೋಗಿಗಳ ಭಾರೀ ಹೊರೆಯನ್ನು ಎದುರಿಸುತ್ತಿದೆ ಎಂದು ಮೂಲಗಳು ಹೇಳಿದೆ. ಸಿಎನ್‌ಸಿಐನ ಎರಡನೇ ಕ್ಯಾಂಪಸ್ ಅನ್ನು 530 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಮಾರು 400 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಮತ್ತು ಉಳಿದವುಗಳನ್ನು ಪಶ್ಚಿಮ ಬಂಗಾಳ ಸರ್ಕಾರವು 75:25 ರ ಅನುಪಾತದಲ್ಲಿ ಒದಗಿಸಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಕ್ಯಾಂಪಸ್ 460 ಹಾಸಿಗೆಗಳ ಸಮಗ್ರ ಕ್ಯಾನ್ಸರ್ ಕೇಂದ್ರ ಘಟಕವಾಗಿದ್ದು, ಕ್ಯಾನ್ಸರ್ ರೋಗ ನಿರ್ಣಯ, ಹಂತ, ಚಿಕಿತ್ಸೆ ಮತ್ತು ಆರೈಕೆಗಾಗಿ ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ. ಇದು ನ್ಯೂಕ್ಲಿಯರ್ ಮೆಡಿಸಿನ್ (PET), 3.0 ಟೆಸ್ಲಾ MRI, 128 ಸ್ಲೈಸ್ CT ಸ್ಕ್ಯಾನರ್, ರೇಡಿಯೋನ್ಯೂಕ್ಲೈಡ್ ಥೆರಪಿ ಘಟಕ, ಎಂಡೋಸ್ಕೋಪಿ ಸೂಟ್, ಆಧುನಿಕ ಬ್ರಾಕಿಥೆರಪಿ ಘಟಕಗಳು ಮುಂತಾದ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಕ್ಯಾಂಪಸ್ ಸುಧಾರಿತ ಕ್ಯಾನ್ಸರ್ ಸಂಶೋಧನಾ ಸೌಲಭ್ಯವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಕ್ಯಾನ್ಸರ್ ರೋಗಿಗಳಿಗೆ, ವಿಶೇಷವಾಗಿ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಿಂದ ಸಮಗ್ರ ಆರೈಕೆಯನ್ನು ಒದಗಿಸುತ್ತದೆ ಎಂದು ಹೇಳಿದೆ.