Wednesday, 11th December 2024

ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ಆತ್ಮಹತ್ಯೆ

ಕೊಯಮತ್ತೂರು : ಕೊಯಮತ್ತೂರು ಡಿಐಜಿ ವಿಜಯಕುಮಾರ್ ಅವರು ಪಾಂಥಯ ಸಲೈನಲ್ಲಿರುವ ತಮ್ಮ ಕ್ಯಾಂಪ್ ಕಚೇರಿ ಯಲ್ಲಿ ಶುಕ್ರವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

2009ರ ಐಪಿಎಸ್ ಬ್ಯಾಚ್‌ನವರಾಗಿದ್ದ ಇವರು, 2022 ಜನವರಿ 6ರಂದು ಚೆನ್ನೈನ ಅಣ್ಣಾನಗರ ಡೆಪ್ಯುಟಿ ಕಮಿಷನರ್‌ನಿಂದ ಕೊಯಮತ್ತೂರು ಡಿಐಜಿಯಾಗಿ ಬಡ್ತಿ ಪಡೆದಿದ್ದರು. ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರ್​ನಲ್ಲಿ ಡಿಎಸ್​ಪಿಯಾಗಿ ಕೆಲಸ ಮಾಡಿದ್ದಾರೆ. ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.