Friday, 13th December 2024

ಅಂಕಣಕಾರ ಸ್ವಪನ್ ದಾಸ್‌ಗುಪ್ತ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಕೆಟ್ ನೊಂದಿಗೆ ಸ್ಪರ್ಧಿಸುತ್ತಿರುವ ಸ್ವಪನ್ ದಾಸ್‌ಗುಪ್ತ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಸಭೆಗೆ ನಾಮಾಂಕಿತಗೊಂಡಿರುವವರು ರಾಜಕೀಯ ಪಕ್ಷವೊಂದಕ್ಕೆ ಸೇರುವಂತಿಲ್ಲ ಎಂದು ಸಾಂವಿಧಾನಿಕ ನಿಯಮವಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ದಾಸ್ ಗುಪ್ತ ರಾಜೀನಾಮೆ ನೀಡಿದ್ದಾರೆ. ದಾಸ್ ಗುಪ್ತ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಬರುವ ವರ್ಷ ಏಪ್ರಿಲ್ ಗೆ ಮುಗಿಯುವುದರಲ್ಲಿತ್ತು.

ರಾಷ್ಟ್ರಪತಿಗಳು ನಾಮಾಂಕಿತಗೊಳಿಸಿರುವ ರಾಜ್ಯಸಭೆಯ ಸದಸ್ಯನಾಗಿ ನನಗೆ ನಿರ್ದಿಷ್ಟ ಸ್ಥಾನಮಾನವಿದೆ. ನಾನು ಈ ಚುನಾವಣೆಯಲ್ಲಿ ತಾರಕೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ನಾಮಪತ್ರ ಸಲ್ಲಿಸುವ ಹೊತ್ತಿಗೆ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಭಾವಿಸುತ್ತೇನೆ. ವಿಧಾನಸಭೆಗೆ ಸ್ಪರ್ಧಿಸಲು ಮುಂದಿನ ಗುರುವಾರ ಅಥವಾ ಶುಕ್ರವಾರ ಸಲ್ಲಿಸುತ್ತೇನೆ ಎಂದು ದಾಸ್ ಗುಪ್ತ ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily