Friday, 13th December 2024

ಹಾಸ್ಯನಟಿ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ಬಂಧನ

ಮುಂಬೈ: ಗಾಂಜಾ ಸಂಗ್ರಹ ಮತ್ತು ಬಳಕೆಯ ಆರೋಪದ ಮೇಲೆ ಹಾಸ್ಯನಟಿ ಭಾರತಿ ಸಿಂಗ್ ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಎನ್‌ಸಿಬಿ ಭಾನುವಾರ ಬಂಧಿಸಿದೆ.

ಎನ್‌ಸಿಬಿ ಅಧಿಕಾರಿಗಳು ಶನಿವಾರವಷ್ಟೇ ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಅವರ ನಿವಾಸದ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿ, ಅಲ್ಪಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದರು. ಹಾಸ್ಯನಟಿಯನ್ನು ಎನ್‌ಡಿಪಿಎಸ್ ಕಾಯ್ದೆ 1986ರ ನಿಬಂಧನೆಗಳ ಅಡಿಯಲ್ಲಿ ಶನಿವಾರ ಬಂಧಿಸಿದ್ದರು.

ಶನಿವಾರದಿಂದ ಹರ್ಷ್ ಲಿಂಬಾಚಿಯಾ ಅವರ ವಿಚಾರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಭಾರತಿ ಮತ್ತು ಅವರ ಪತಿ ಇಬ್ಬರೂ ಗಾಂಜಾ ಸೇವನೆ ಒಪ್ಪಿಕೊಂಡಿದ್ದಾರೆ ಎಂದು ಎನ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಪೆಡ್ಲರ್‌ರೊಬ್ಬರ ವಿಚಾರಣೆ ವೇಳೆ ಭಾರ್ತಿ ಸಿಂಗ್ ಅವರ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ನಿರ್ಮಾಣ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ್ದರು.  ಭಾರ್ತಿ ಸಿಂಗ್ ಅವರು ಹಲವು ಕಾಮಿಡಿ ಮತ್ತು ರಿಯಾಲಿಟಿ ಷೋಗಳಲ್ಲಿ ಕಾಣಿಸಿ ಕೊಂಡಿದ್ದು, ಕೆಲವು ಷೋಗಳನ್ನು ನಡೆಸಿಕೊಡುತ್ತಾರೆ.