Wednesday, 11th December 2024

19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 7 ರೂ ಹೆಚ್ಚಳ

ವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮಾರಾಟ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 7 ರೂ ಹೆಚ್ಚಿಸಿದೆ.

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ಸಂಸ್ಥೆಗಳು ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ, ಜೂನ್‌ನಲ್ಲಿ ಹಿಂದಿನ ಬೆಲೆ ಇಳಿಕೆಯಿಂದ ದೆಹಲಿಯಲ್ಲಿ ತಲಾ 1,773 ರೂ ಆಗಿತ್ತು ಈಗ ಅದು 1,780 ಆಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ಮತ್ತು ಹಿಂದೂ ಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್), ಎಲ್ಲಾ ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಗಳನ್ನು ಆಧರಿಸಿ ಅಡುಗೆ ಅನಿಲದ ಬೆಲೆಗಳನ್ನು ಮಾಸಿಕವಾಗಿ ಸರಿಹೊಂದಿಸುತ್ತವೆ.