Sunday, 13th October 2024

ಎರಡು ಬಸ್ಸುಗಳು ಡಿಕ್ಕಿ: 3 ಕಾಂಗ್ರೆಸ್ ಕಾರ್ಯಕರ್ತರ ಸಾವು

ಮೊಗಾ : ಪಂಜಾಬ್‌ ರಾಜ್ಯದ ಮೊಗಾ ಜಿಲ್ಲೆಯಲ್ಲಿ ಶುಕ್ರವಾರ ಎರಡು ಬಸ್ಸುಗಳು ಡಿಕ್ಕಿ ಹೊಡೆದು ಅನೇಕರು ಮೃತಪಟ್ಟಿದ್ದಾರೆ.

ಮೊಗಾ ಜಿಲ್ಲೆಯ ಲೋಹರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿ ದ್ದಾರೆ. ಒಂದು ಬಸ್ ರಾಜ್ಯ ಸಾರಿಗೆ ವಾಹನವಾಗಿದ್ದರೆ, ಇನ್ನೊಂದು ಬಸ್ ಖಾಸಗಿ ಮಿನಿ ಬಸ್ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೊಗಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 3 ಕಾಂಗ್ರೆಸ್ ಕಾರ್ಯಕರ್ತರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕರ್ತರು, ನವಜೋತ್‌ ಸಿಂಗ್ ಸಿಧು ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದರು ಎಂದು ಹೇಳಲಾಗಿದೆ.