Friday, 13th December 2024

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ’ಕೈ’ ಟಿಕೆಟ್‌

ಲಖನೌ: ಉನ್ನಾವೋ (2017ರ )ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಕಾಂಗ್ರೆಸ್ ತನ್ನ ಚುನಾವಣಾ ಅಭ್ಯರ್ಥಿಯಾಗಿ ಹೆಸರಿಸಿದೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಉನ್ನಾವೋ ಸಂತ್ರಸ್ತೆಯ ತಾಯಿ ಕಾಂಗ್ರೆಸ್ ಪಕ್ಷದಿಂದ ಕಣ್ಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಜವಾಬ್ದಾರಿ ಹೊತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರನ್ನ ಬಿಡುಗಡೆ ಮಾಡಿದ್ದಾರೆ.

2017 ರಲ್ಲಿ ಬಾಲಕಿಯ ಮೇಲಿನ ಅತ್ಯಾಚಾರದ ಆರೋಪದಲ್ಲಿ ಬಿಜೆಪಿಯ ಮಾಜಿ ನಾಯಕನಿಗೆ ಈಗಾಗ್ಲೇ ನ್ಯಾಯಾಲಯದ ಆದೇಶದಂತೆ ಜೈಲುಶಿಕ್ಷೆ ನೀಡಲಾಗಿದೆ.

ʼಲಡ್ಕಿ ಹೂಂ, ಲಡ್ ಸಕ್ತಿ ಹೂಂʼ ಎಂದು ಚುನಾವಣೆ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್, 40 ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಟ್ಟಿದೆ. ನಮ್ಮ ಪ್ರಚಾರವು ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಇರುತ್ತದೆ. ಯುಪಿಯಲ್ಲಿ ಪ್ರಾರಂಭಿಸಿದ್ದನ್ನು ಇಲ್ಲೆ ಇದ್ದು ಮುಂದುವರಿಸುತ್ತೇನೆ ಮತ್ತು ಚುನಾವಣೆಯ ನಂತರವೂ ನಾನು ರಾಜ್ಯದಲ್ಲಿಯೇ ಇರುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂದು ಪ್ರಿಯಾಂಕ ಹೇಳಿದ್ದಾರೆ.

ರಾಹುಲ್ ಗಾಂಧಿಯೂ ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕರಿಂದ ಉನ್ನಾವೋನಲ್ಲಿ ಯಾವ ಬಾಲಕಿಯ ಮೇಲೆ ಅನ್ಯಾಯವಾಗಿತ್ತೋ ಆ ಬಾಲಕಿಯ ತಾಯಿ ನ್ಯಾಯದ ಮುಖವಾಗುತ್ತಾರೆ, ಹೋರಾಡುತ್ತಾರೆ, ಗೆಲ್ಲುತ್ತಾರೆ ಎಂದಿದ್ದಾರೆ.