Saturday, 14th December 2024

ಮಾನಸಿಕ ಅಸ್ವಸ್ಥೆ ಮೇಲೆ ಕಾನ್​​ಸ್ಟೇಬಲ್​ ಬಲತ್ಕಾರ

ನಿಜಾಮಾಬಾದ್(ತೆಲಂಗಾಣ): ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ನಡೆದಿದೆ. ತಬ್ಬಲಿ ಯುವತಿ ಮೇಲೆ ಆಕೆಯ ದೊಡ್ಡಪ್ಪ ಪೊಲೀಸ್​ ಕಾನ್​​ಸ್ಟೇಬಲ್​ ಬಲತ್ಕಾರ ಎಸಗಿದ್ದು, ಸದ್ಯ ಯುವತಿ ಎಂಟು ತಿಂಗಳು ಗರ್ಭಿಣಿಯಾಗಿ ದ್ದಾಳೆ.

ಸಂತ್ರಸ್ತೆ ಮಾನಸಿಕ ಅಸ್ವಸ್ಥಗಳಾಗಿದ್ದು, ತನೊಂದಿಗೆ ಏನು ನಡೆದಿದೆ ಎಂಬ ಪ್ರಜ್ಞೆಯೂ ಆಕೆಗೆ ಇಲ್ಲ!.

ಎಂಟು ವರ್ಷಗಳ ಹಿಂದೆ ತಾಯಿ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದ ಇಬ್ಬರು ಬಾಲಕಿಯರು ತಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನ ಪಾಲನೆಯಲ್ಲಿ ಇದ್ದರು. ಆದರೆ, ದೊಡ್ಡಮ್ಮ ಹಣಕ್ಕಾಗಿ ಹಿರಿಯ ಬಾಲಕಿಯನ್ನು ಕಾನ್​ಸ್ಟೇಬಲ್​​ ಆದ ಚಂದ್ರಕಾಂತ್​ ಎಂಬಾತನ ಬಳಿ ಬಿಟ್ಟಿದ್ದಳು. 22 ವರ್ಷದ ಯುವತಿ ಮಾನಸಿಕ ಅಸ್ವಸ್ಥಗಳಾಗಿದ್ದು, ಆಕೆ ಮೇಲೆ ಕಾನ್​ಸ್ಟೇಬಲ್​​ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ಕೃತ್ಯ ಬೆಳಕಿಗೆ ಬಾರದಂತೆ ನೋಡಿಕೊಳ್ಳಲು ದೊಡ್ಡಪ್ಪ ಮತ್ತು ದೊಡ್ಡಮ್ಮ ಇಬ್ಬರೂ ಸೇರಿಕೊಂಡು ಬಾಲಕಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ಆದರೆ, ಸಂತ್ರಸ್ತಯ ತಂಗಿ ತನ್ನ ಅಕ್ಕನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಇದೀಗ ಈ ದುಷ್ಕೃತ್ಯ ಬಯಲಿಗೆ ಬಂದಿದೆ.

ಯುವತಿ ಎಂಟು ತಿಂಗಳ ಗರ್ಭಿಣಿಯಾದ ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ 61 ವರ್ಷದ ದೊಡ್ಡಪ್ಪ ಕೂಡ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಭಾಗಿಯಾದ 56 ವರ್ಷದ ಪೊಲೀಸ್​ ಕಾನ್​ಸ್ಟೇಬಲ್​​ ಚಂದ್ರಕಾಂತ್​ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.