Wednesday, 11th December 2024

ಖಾದ್ಯ ತೈಲ ತಯಾರಿಕೆಯಲ್ಲಿ ಸ್ವಾವಲಂಬಿಯಾಗಲು ಪ್ರಧಾನಿ ಕರೆ

ನವದೆಹಲಿ: ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ವಾರ್ಷಿಕವಾಗಿ 6.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಶನಿವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಖಾದ್ಯ ತೈಲ ತಯಾರಿಕೆಯಲ್ಲಿ ದೇಶವನ್ನು ಸ್ವಾವಲಂಬಿ ಯನ್ನಾಗಿ ಮಾಡಲು ಸಹಕಾರಿ ಸಂಘಗಳಿಗೆ ಕರೆ ನೀಡಿದರು.
ಅಂತರಾಷ್ಟ್ರೀಯ ಸಹಕಾರಿ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪಿಎಂ ಕಿಸಾನ್ ಯೋಜನೆ, ಬೆಂಬಲ ಬೆಲೆ ಯೋಜನೆ ಮತ್ತು ರಸಗೊಬ್ಬರ ಸಬ್ಸಿಡಿಯಂತಹ ತಮ್ಮ ಸರ್ಕಾರ ಮಾಡಿದ ಕೆಲಸ ಗಳನ್ನು ಒತ್ತಿ ಹೇಳಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನ ಗಳನ್ನು ಖರೀದಿ ಸಿದ್ದು, ರೂ. 15 ಲಕ್ಷಕ್ಕೂ ಕೋಟಿಗೂ ಅಧಿಕ ಹಣವನ್ನು ರೈತರಿಗೆ ನೀಡಲಾಗಿದೆ. ಕಳೆದ ವರ್ಷ ರಸಗೊಬ್ಬರ ಸಬ್ಸಿಡಿಗಾಗಿ ರೂ. 10 ಲಕ್ಷ ಕೋಟಿ ಖರ್ಚು ಮಾಡಲಾಗಿದೆ ಎಂದರು.
ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರ ಕೃಷಿ ಮತ್ತು ರೈತರಿಗಾಗಿ ವರ್ಷಕ್ಕೆ ಸುಮಾರು 6.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಪ್ರತಿ ವರ್ಷ ಯಾವುದಾದರೂಂದು ರೂಪದಲ್ಲಿ ಪ್ರತಿ ರೈತರಿಗೆ ಸರಾಸರಿ 50,000 ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದು ಮೋದಿಯವರ ಗ್ಯಾರಂಟಿ ಎಂದ ಅವರು, ತಾನೂ ಸರ್ಕಾರ ಮಾಡಿರುವುದನ್ನು ಹೇಳುತ್ತಿದ್ದೇನೆ ಹೊರತು ಭರವಸೆ ಅಲ್ಲ, ಕಳೆದ 4 ವರ್ಷಗಳಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ಕಳುಹಿಸಲಾಗಿದೆ ಎಂದು ಪ್ರಧಾನಿ ಹೇಳಿದರು.