ನವದೆಹಲಿ: ಭಾರತದಲ್ಲಿ ಕರೋನಾ 2ನೇ ಅಲೆಯ ಆರ್ಭಟದಲ್ಲಿ ಇಳಿಕೆಯಾಗಿಲ್ಲ. ಗುರುವಾರ ಕಳೆದ 24 ತಾಸುಗಳಲ್ಲಿ ಭಾರತ ದಲ್ಲಿ 2,11,298 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಾಗೂ 3,847 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಈ ಮೂಲಕ ಸೋಂಕಿತರ ಸಂಖ್ಯೆ 2,73,69,093ಕ್ಕೆ ಏರಿಕೆಯಾಗಿ, ಮೃತಪಟ್ಟವರ ಸಂಖ್ಯೆ 3,15,235ಕ್ಕೆ ತಲುಪಿದೆ. ದಾಖಲೆ ಮಟ್ಟ ದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,19,907ಕ್ಕೆ ಏರಿಕೆಯಾಗಿದೆ.
2,83,135 ಮಂದಿ ಗುಣಮುಖರಾಗುವುದರೊಂದಿಗೆ, ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,46,33,951ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ 21,57,857 ಮಂದಿಯನ್ನು ಕರೋನಾ ಪರೀಕ್ಷೆಗೊಳಪಡಿಸಲಾಗಿದ್ದು, 33,69,69,352 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ವರದಿಯಾಗಿದೆ. ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 20,26,95,874 ಮಂದಿಗೆ ಲಸಿಕೆಯನ್ನು ನೀಡಲಾಗಿದೆ.