Saturday, 14th December 2024

60,753 ಕರೋನಾ ಹೊಸ ಪ್ರಕರಣಗಳು ಪತ್ತೆ

#corona

ನವದೆಹಲಿ: ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

ಕಳೆದ 24 ಗಂಟೆಗಳಲ್ಲಿ 60,753 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಮೂರು ಕೋಟಿ (2,98,23,546) ಆಸುಪಾಸಿದೆ.  ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.

ದಾಖಲಾದ ಪ್ರಕರಣಗಳ ಸಂಖ್ಯೆ 74 ದಿನಗಳ ನಂತರ ಸಾರ್ವಕಾಲಿಕ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 1647 ಸಾವುಗಳು ಸಂಭವಿಸಿವೆ. ಕರೋನಾದಿಂದ ಈವರೆಗೆ ಒಟ್ಟು 3,85,137 ಜನರು ಮೃತಪಟ್ಟಿದ್ದಾರೆ. 7,60,019 ಸಕ್ರಿಯ ಪ್ರಕರಣಗಳಿವೆ.