Friday, 13th December 2024

5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಏರಿಕೆ

#covid

ನವದೆಹಲಿ : ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ 5 ರಾಜ್ಯಗಳು ಕೋವಿಡ್ ಪ್ರಕರಣಗಳು ಕೊಂಚ ಏರಿಕೆ ಕಂಡಿದೆ.

ಕಳೆದ ವಾರದಲ್ಲಿ ದೇಶದಲ್ಲಿ ಸುಮಾರು 25,000 ಪ್ರಕರಣಗಳು ದಾಖಲಾಗಿದ್ದವು. ಇದು 3 ತಿಂಗಳಲ್ಲಿ ಅತಿ ಹೆಚ್ಚು 7 ದಿನಗಳ ಸಂಖ್ಯೆಯಾಗಿದೆ.

ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 961 ಸೇರಿದಂತೆ 1,494 ಹೊಸ ಕೋವಿಡ್​ ಪ್ರಕರಣಗಳು ವರದಿ, ಸೋಂಕಿನಿಂದ ಒಂದು ಸಾವು ಸಂಭವಿಸಿದೆ. ಕೇಸ್​ಗಳ ಸಂಖ್ಯೆ 78,93,197 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,47,866 ಕ್ಕೆ ತಲುಪಿದೆ. ಮಹಾರಾಷ್ಟ್ರ ಸರ್ಕಾರವು ನಾಗರಿಕರು ತೆರೆದ ಸ್ಥಳಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಹಿಂದಿನ ಶನಿವಾರ, ದೈನಂದಿನ ಕೋವಿಡ್ ಸಂಖ್ಯೆಯ 1,500 ದಾಟಿದ್ದು, 1,544 ಕ್ಕೆ ಏರಿಕೆಯಾಗಿದ್ದು, ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ತಿಂಗಳ ಆರಂಭದಲ್ಲಿ ಪ್ರಕರಣಗಳು ಕ್ರಮವಾಗಿ 1,370, 1,278 ಮತ್ತು 1,465 ರಷ್ಟಿದ್ದವು.

ಕರ್ನಾಟಕದಲ್ಲಿ ಭಾನುವಾರ 301 ಹೊಸ ಕೋವಿಡ್​​ ಪ್ರಕರಣಗಳು ಹಾಗೂ ಒಂದು ಸಾವು ವರದಿಯಾಗಿದೆ. ಈ ಮೂಲಕ ಕರೋನಾ ಕೇಸ್​ಗಳ ಸಂಖ್ಯೆ 39,53,359 ಕ್ಕೆ ಏರಿಕೆಯಾಗಿದೆ.

ತಮಿಳುನಾಡು ರಾಜ್ಯದಲ್ಲಿ 107 ಕೋವಿಡ್ ಪ್ರಕರಣಗಳು ವದಿಯಾಗಿವೆ. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್​ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಒಮಿಕ್ರಾನ್ ಕೋವಿಡ್ ರೂಪಾಂತರದ ಬಿಎ.4 ಮತ್ತು ಬಿಎ.5 ಉಪ-ವೇರಿಯಂಟ್‌ಗಳನ್ನು ತಮಿಳುನಾಡು ಸಹ ವರದಿ ಮಾಡಿದೆ

ದೆಹಲಿಯಲ್ಲಿ ಭಾನುವಾರ 343 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 19,08,730 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 26,212 ಆಗಿದೆ. ಶನಿವಾರ, ರಾಜಧಾನಿಯು 405 ಹೊಸ ಪ್ರಕರಣಗಳನ್ನು 2.07 ಶೇಕಡಾ ಸಕಾರಾತ್ಮಕ ದರದೊಂದಿಗೆ ದಾಖಲಿಸಿದೆ.ಆದರೆ ಯಾವುದೇ ಹೊಸ ಸಾವು ವರದಿಯಾಗಿಲ್ಲ.

ಅಗತ್ಯವಿದ್ದಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳಿಗೆ ಸಲಹೆ ನೀಡಿತ್ತು. ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೆಲವು ರಾಜ್ಯಗಳಲ್ಲಿ ಕರೋನಾ ಕೇಸ್​ಗಳು ವರದಿಯಾಗಿದ್ದು, ಭಾರತದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿವೆ. ಇದು ಸೋಂಕಿನ ಸ್ಥಳೀಯ ಹರಡುವಿಕೆಯ ಸಾಧ್ಯತೆಯನ್ನು ಸೂಚಿಸುತ್ತದೆ.