Saturday, 23rd November 2024

ಉತ್ತರ ಪ್ರದೇಶದಲ್ಲಿ ಕರೋನಾ ಇಳಿಕೆ: ನಿರ್ಬಂಧ ಸಡಿಲ

ಲಕ್ನೋ: ಉತ್ತರ ಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಲ್ಲಾ ಕರೋನಾ ನಿರ್ಬಂಧಗಳನ್ನು ಸಡಿಲ ಗೊಳಿಸ ಲಾಗಿದೆ.

ಸಾಮಾಜಿಕ ಸಭೆಗಳ ಮೇಲಿನ ನಿಷೇಧ ತೆಗೆದು ಹಾಕಲಾಗಿದೆ. ಈಜು ಕೊಳಗಳು, ವಾಟರ್ ಪಾರ್ಕ್‌ಗಳು ಮತ್ತು ಅಂಗನವಾಡಿ ಕೇಂದ್ರ ಗಳನ್ನು ಸಹ ತೆರೆಯಲಾಗುತ್ತದೆ. ಆದರೆ ಮನೆಯಿಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಈ ಆದೇಶದ ಪ್ರಕಾರ, ಮದುವೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಡಿಲಿಕೆ ಇರುತ್ತದೆ.

ಮಾ.16 ರಂದು, 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ತಡೆ ಗಟ್ಟುವ ಡೋಸ್‌ ಗಳನ್ನು ಪ್ರಾರಂಭಿ ಸಲಾಗಿದೆ. ಯುಪಿಯ 300 ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾ ಗಿದೆ.

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 51 ಹೊಸ ಕರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ, 9 ಜಿಲ್ಲೆಗಳು ಸೋಂಕು ಮುಕ್ತವಾಗಿವೆ. ಈಗ ಕರೋನಾ ರೋಗಿಯಿಲ್ಲದ ಜಿಲ್ಲೆಗಳಲ್ಲಿ ಬದೌನ್, ಬಲರಾಮ್‌ಪುರ್, ಹಾಪುರ್, ಹತ್ರಾಸ್, ಕಾಸ್‌ಗಂಜ್, ಕೌಶಾಂಬಿ, ಮಹೋಬಾ, ರಾಂಪುರ ಮತ್ತು ಶ್ರಾವಸ್ತಿ ಸೇರಿವೆ. ಮತ್ತೊಂದೆಡೆ, ಇನ್ನೂ, 150 ಕರೋನಾ ಸೋಂಕಿತ ರೋಗಿಗಳು ಆರೋಗ್ಯವಂತ ರಾಗಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬೆನ್ನಲ್ಲೇ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಯುಪಿಯಲ್ಲಿ 37 ವರ್ಷಗಳ ನಂತರ ಸತತ ಎರಡನೇ ಬಾರಿಗೆ ಪಕ್ಷವೊಂದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು.

ಮಾ.21 ರಂದು ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಲು ಸಮಾರಂಭ ಏರ್ಪಡಿಸಲಾಗಿದೆ.