Wednesday, 11th December 2024

ಕೋವಿಡ್-19 ಲಾಕ್ ಡೌನ್ ಒಂದು ವಾರ ವಿಸ್ತರಣೆ: ಕೇಜ್ರಿವಾಲ್ ಆದೇಶ

Arvind Kejrival

ನವದೆಹಲಿ: ನವದೆಹಲಿಯಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಏ.26 ರ ಬೆಳಿಗ್ಗೆಯವರೆಗೆ ಜಾರಿಯಲ್ಲಿರುವ ಸಂಪೂರ್ಣ ಕೋವಿಡ್-19 ಲಾಕ್ ಡೌನ್ ಅನ್ನು ಮತ್ತೊಂದು ವಾರ ವಿಸ್ತರಣೆ ಮಾಡಿ ದೆಹಲಿ ಸಿಎಂ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಕರೋನಾ ವೈರಸ್ ಪರಿಸ್ಥಿತಿ ಭೀಕರವಾಗಿರುವುದರಿಂದ ಲಾಕ್ ಡೌನ್ ಅನ್ನು ಮತ್ತೆ ಒಂದು ವಾರಗಳ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ.

ಶನಿವಾರ 24,103 ಹೊಸ ಕೋವಿಡ್-19 ಸೋಂಕುಗಳು ಮತ್ತು 357 ಸಾವುಗಳು ದಾಖಲಾಗಿವೆ, ದೆಹಲಿಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೆ ಸಮೀಪಿಸಿದೆ.