Wednesday, 11th December 2024

ಇಂದು ರಾಷ್ಟ್ರವ್ಯಾಪಿ ಕೋವಿಡ್-19 ಅಣಕು ಡ್ರಿಲ್

ನವದೆಹಲಿ: ಭಾರತವು ಕೋವಿಡ್ -19 ಸನ್ನದ್ಧತೆ ಪರೀಕ್ಷಿಸಲು ಡಿಸೆಂಬರ್ 27 ರಂದು ರಾಷ್ಟ್ರವ್ಯಾಪಿ ಅಣಕು ಡ್ರಿಲ್ ನಡೆಸುತ್ತಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅಣಕು ಡ್ರಿಲ್ ನ ನೇತೃತ್ವ ವಹಿಸಿದ್ದು, ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಸನ್ನದ್ಧತೆಗಳನ್ನು ಪರಿಶೀಲಿಸಿದರು.

ಸಫ್ದರ್ಜಂಗ್ ಆಸ್ಪತ್ರೆ ಡ್ರಿಲ್ ಅನ್ನು ಆಯೋಜಿಸಿದ ರೀತಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು ಅಣಕು ಡ್ರಿಲ್ಗಳನ್ನು ಹೇಗೆ ನಡೆಸಬೇಕು ಮತ್ತು ಸಿದ್ಧವಾಗಿರಬೇಕು ಎಂದು ಹೇಳಿದರು.

ಈ ಹಿಂದೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವೈದ್ಯರೊಂದಿಗೆ ನಡೆದ ಸಭೆ ಯಲ್ಲಿ ಮಾಂಡವಿಯಾ, ಅಣಕು ಡ್ರಿಲ್ ಭಾರತದ ಕಾರ್ಯಾಚರಣೆಯ ಸನ್ನದ್ಧತೆಗೆ ಸಹಾಯ ಮಾಡುತ್ತದೆ. ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯಲ್ಲಿ ಯಾವುದೇ ಕೊರತೆ ಗಳಿದ್ದರೆ ಅದನ್ನು ತುಂಬಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಜಮ್ಮು, ಕೇರಳ, ಕರ್ನಾಟಕ, ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಕೋವಿಡ್ -19 ಅಣಕು ಡ್ರಿಲ್ ನಡೆಯುತ್ತಿದೆ.

ಇಂದು ನಡೆಯುತ್ತಿರುವ ಅಣಕು ಡ್ರಿಲ್ ನಲ್ಲಿ ಎಲ್ಲಾ ರಾಜ್ಯಗಳಲ್ಲಿ ಸಾಕಷ್ಟು ಆರೋಗ್ಯ ಸೌಲಭ್ಯಗಳ ಲಭ್ಯತೆಯನ್ನು ಕೇಂದ್ರೀ ಕರಿಸುತ್ತದೆ ಮತ್ತು ಪ್ರತ್ಯೇಕ ಹಾಸಿಗೆಗಳು, ಆಮ್ಲಜನಕ ಮೂಲಸೌಕರ್ಯ ಮತ್ತು ತೀವ್ರ ನಿಗಾ ಘಟಕಗಳಿಗೆ (ಐಸಿಯು) ಸಾಮರ್ಥ್ಯವನ್ನು ಪರಿಶೀಲಿಸುತ್ತದೆ.

Read E-Paper click here