ನವದೆಹಲಿ: ದೇಶದಲ್ಲಿ ಆರು ತಿಂಗಳ ನಂತರ ಭಾನುವಾರ ಅತ್ಯಧಿಕ ಪ್ರಮಾಣದ ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
3,824 ದೈನಂದಿನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಪ್ರಮಾಣ 18,389ರಷ್ಟಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಆರು ತಿಂಗಳ ಹಿಂದೆ ಮೂರು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದವು. ಬಳಿಕ ಕೋವಿಡ್ ಕ್ಷೀಣ ವಾಗಿತ್ತು. ದೆಹಲಿ, ಹರ್ಯಾಣ, ಕೇರಳ ಮತ್ತು ರಾಜಸ್ಥಾನದಲ್ಲಿ ತಲಾ ಒಬ್ಬರ ಜೀವ ಹಾನಿಯಾಗಿದೆ.
ಒಟ್ಟು ಸೋಂಕಿನ ಸಂಖ್ಯೆ ಶೇ.4,47,22,605ರಷ್ಟಿದೆ. 4,41,73,335 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದೇಶಾದ್ಯಂತ 220.66 ಕೋಟಿ ಲಸಿಕೆಯನ್ನು ನೀಡಲಾಗಿದೆ.