Saturday, 14th December 2024

Cow Dung : ದನದ ಕೊಟ್ಟಿಗೆ ಶುಚಿಗೊಳಿಸಿ, ಅಲ್ಲೇ ಮಲಗಿದರೆ ಕ್ಯಾನ್ಸರ್ ವಾಸಿಯಾಗುತ್ತದೆ ಎಂದ ಉತ್ತರ ಪ್ರದೇಶದ ಸಚಿವ

Cow Dung

ಲಕ್ನೋ: ಕ್ಯಾನ್ಸರ್ ರೋಗಿಗಳು ದನದ ಕೊಟ್ಟಿಗೆಗಳ ಸೆಗಣಿ ಬಾಚಿ (Cow Dung) ಸ್ವಚ್ಛಗೊಳಿಸಿ ಅಲ್ಲೇ ಮಲಗಿದರೆ ರೋಗ ವಾಸಿಯಾಗುತ್ತದೆ ಹಾಗೂ ಹಸುಗಳನ್ನು ಸಾಕಿ ಅವುಗಳನ್ನು 10 ದಿನಗಳ ಕಾಲ ಪಾಲನೆ ಮಾಡಿದರೆ ಬಿಪಿ ಮಾತ್ರೆಗೆ ಕೊಡುವ ಮಾತ್ರೆಯ ದುಡ್ಡು ಅರ್ಧದಷ್ಟು ಉಳಿಸಬಹುದು ಎಂದು ಉತ್ತರ ಪ್ರದೇಶದ ಸಚಿವ ಕಬ್ಬು ಅಭಿವೃದ್ಧಿಯ ಕಿರಿಯ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದ್ದಾರೆ.

ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಅವರ ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸಬೇಕು ಎಂಬುದಾಗಿ ಅವರು ಇದೇ ವೇಳೆ ಹೇಳಿದರು. ಗಂಗ್ವಾರ್ ಅವರು ಭಾನುವಾರ ತಮ್ಮ ಕ್ಷೇತ್ರ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆ ಉದ್ಘಾಟಿಸಿದ ಸಂದರ್ಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

ಹಿಂದಿಯಲ್ಲಿ ಮಾತನಾಡಿದ ಸಚಿವರು “ರಕ್ತದೊತ್ತಡ ರೋಗಿ ಇದ್ದರೆ ಹಸುಗಳು ಉತ್ತಮ ಔಷಧ. ವ್ಯಕ್ತಿಯು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಸುವನ್ನು ಪಾಲನೆ ಮಾಡಬೇಕು. ವ್ಯಕ್ತಿಯು ರಕ್ತದೊತ್ತಡಕ್ಕೆ 20 ಮಿಗ್ರಾಂ ಡೋಸ್ ಔಷಧ ತೆಗೆದುಕೊಳ್ಳುತ್ತಿದ್ದರೆ ಅದು 10 ದಿನಗಳಲ್ಲಿ 10 ಮಿಗ್ರಾಂಗೆ ಇಳಿಯುತ್ತದೆ. ಇದನ್ನೂ ಪರೀಕ್ಷೆ ಮಾಡಿ ನೋಡಬಹುದು ಎಂದು ಅವರು ಹೇಳಿದರು.

ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ ಅಲ್ಲಿಯೇ ಮಲಗಿದರೆ ಕ್ಯಾನ್ಸರ್ ಅನ್ನು ಸಹ ಗುಣಪಡಿಸಬಹುದು. ನೀವು ಹಸುವಿನ ಸಗಣಿ ಬೆರಣಿಯನ್ನು ಹೊತ್ತಿಸಿದರೆ ನೀವು ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ಆದ್ದರಿಂದ, ಹಸು ಉತ್ಪಾದಿಸುವ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rakesh Tikait : ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಭೂಪಿಂದರ್‌ ಹೂಡಾ ಮೊಂಡುತನ ಕಾರಣ; ರೈತ ಮುಖಂಡ ಟಿಕಾಯತ್ ಆರೋಪ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸಲು ಮತ್ತು ಮೇವನ್ನು ದಾನ ಮಾಡಬೇಕು ಎಂದು ಹೇಳಿದರು.