Friday, 13th December 2024

ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: 14 ವಾಹನ ಬೆಂಕಿಗಾಹುತಿ

ಮುಂಬೈ : ಮುಂಬೈನ ಗಿರ್ಗಾಂವ್‌ನಲ್ಲಿನ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ 6 ಕಾರುಗಳು, 7 ಬೈಕ್‌ಗಳು ಸೇರಿದಂತೆ 14 ವಾಹನಗಳು ಬೆಂಗಾಹುತಿಯಾಗಿವೆ.

ಗೋದಾಮಿನ ಹೊರಗೆ ವಾಹನಗಳು ನಿಂತಿದ್ದವು. ಜನರು ಬೆಂಕಿ ನಂದಿಸುವ ಮುನ್ನವೇ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ವಾಹನಗಳಲ್ಲಿ ಆರು ಕಾರುಗಳು, ಏಳು ಬೈಕ್‌ಗಳು ಮತ್ತು ಸ್ಕೂಟರ್‌ಗಳು, ಒಂದು ಆಟೋರಿಕ್ಷಾ ಸೇರಿದೆ ಎನ್ನಲಾಗುತ್ತದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಟ್ಯಾಂಕರ್‌ಗಳ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತಂದಿ ದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.