Wednesday, 6th November 2024

ರೈತರಿಗೆ ಅವಕಾಶಗಳ ಬಾಗಿಲು ತೆರೆದು, ಹೆಚ್ಚಿನ ಹಕ್ಕುಗಳನ್ನು ನೀಡಬೇಕು: ಪ್ರಧಾನಿ ಮೋದಿ

ನವದೆಹಲಿ : ಸಂಸತ್ತಿನಲ್ಲಿ ಕೃಷಿ ಸುಧಾರಣೆಗಳಿಗೆ ಕಾನೂನು ರೂಪವನ್ನು ನೀಡಿತು. ನಮ್ಮ ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆದು ಅವರಿಗೆ ಮತ್ತಷ್ಟು ಹೆಚ್ಚಿನ ಹಕ್ಕುಗಳನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ ನಡೆದ 71 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ, ಪ್ರಧಾನಿ ಮೋದಿ ಅವರು ಕೇಂದ್ರದ ಹೊಸ ಕೃಷಿ ಕಾನೂನುಗಳು ಮತ್ತು ಅವರು ತಂದ ಅನುಕೂಲಗಳ ಬಗ್ಗೆ ಮಾತನಾಡಿ, ಹೊಸದಾಗಿ ಜಾರಿಗೆ ತರಲಾದ ಕೃಷಿ ಕಾನೂನುಗಳನ್ನು ವಿರೋಧಿಸುವ ರೈತರ ಭಯವನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದರು.

ಯುವಜನರು, ವಿಶೇಷವಾಗಿ ಕೃಷಿಯ ಕುರಿತಾಗಿ ಅಧ್ಯಯನ ಮಾಡಿದವರು ಹತ್ತಿರದ ಹಳ್ಳಿಗಳಿಗೆ ಹೋಗಿ ಆಧುನಿಕ ಕೃಷಿ ಮತ್ತು ಹೊಸ ಕೃಷಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.

ಕೇಂದ್ರವು ಡಿ.3 ರಂದು ರೈತ ಸಂಘಗಳೊಂದಿಗೆ ಮಾತುಕತೆ ನಡೆಸಲಿದೆ. ಅದಕ್ಕೂ ಮುನ್ನ ಚರ್ಚೆ ನಡೆಸಲು ಬಯಸಿದರೆ ಅವರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಹೇಳಿದರು.