Wednesday, 11th December 2024

ಸ್ಮಶಾನದ ಛಾವಣಿ ಕುಸಿದು 15 ಮಂದಿ ಸಾವು

ನವದೆಹಲಿ: ದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ಸ್ಮಶಾನದ ಕಾಂಪೌಂಡ್ ಗೋಡೆ, ಇದಕ್ಕೆ ತಾಗಿಕೊಂಡ ಛಾವಣಿ ಕುಸಿದು 15 ಮಂದಿ ಸಾವನ್ನಪ್ಪಿದ್ದಾರೆ.

ಗಾಜಿಯಾಬಾದ್ ನ ಮುರಾದ್ ನಗರದಲ್ಲಿ ಘಟನೆ ನಡೆದಿದೆ. ದೆಹಲಿ ಸೇರಿದಂತೆ ಗಾಜಿಯಾಬಾದ್ ನಲ್ಲಿ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದು, ವ್ಯಕ್ತಿಯೊಬ್ಬನ ಅಂತಿಮ ಸಂಸ್ಕಾರಕ್ಕೆ ಸಂಬಂಧಿಕರು ಸ್ಮಶಾನಕ್ಕೆ ಹೋಗಿದ್ದರು ಎನ್ನಲಾಗಿದೆ.

ಮಳೆ ಕಾರಣ ಸ್ಮಶಾನದ ಛಾವಣಿ ಕೆಳಗೆ ನಿಂತಿದ್ದಾರೆ. ಛಾವಣಿ ಮುರಿದು ಬಿದ್ದಿದ್ದು, ಜನರು ಸಿಲುಕಿದ್ದಾರೆ. ಲ್ಯಾಂಟರ್ ದೊಡ್ಡ ದಾಗಿದ್ದ ಕಾರಣ ಅದನ್ನು ತೆಗೆಯುವುದು ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಮಂದಿ ಅಲ್ಲಿದ್ದರು ಎನ್ನಲಾಗಿದೆ. 15 ಮಂದಿ ಸಾವನ್ನಪ್ಪಿದ್ದು, ಉಳಿದವರ ರಕ್ಷಣೆ ನಡೆಯುತ್ತಿದೆ.