Thursday, 3rd October 2024

Crime News: ನಾಲ್ಕನೇ ಬಾರಿಯೂ ಹೆಣ್ಣು ಮಗುವೆಂದು ನೆಲಕ್ಕೆ ಬಡಿದು ಕೊಂದ ಪಾಪಿ ತಂದೆ

Crime News

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಂದೆ ನಾಲ್ಕನೇ ಬಾರಿಯೂ ಹೆಣ್ಣು ಮಗು ಜನಿಸಿದ್ದಕ್ಕೆ ಕೋಪಗೊಂಡು ನವಜಾತ ಶಿಶುವನ್ನೇ ನೆಲಕ್ಕೆ ಹೊಡೆದು ಕೊಂದ (Crime News) ಘಟನೆ ಉತ್ತರ ಪ್ರದೇಶದ (uttarpradesh) ಇಟಾವಾನಗರದಲ್ಲಿ ನಡೆದಿದೆ. ಆರೋಪಿ ಬಬ್ಲು ದಿವಾಕರ್ ಎಂಬಾತನನ್ನು (30) ಪೊಲೀಸರು ಬಂಧಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಬಬ್ಲು ದಿವಾಕರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ದಿವಾಕರ್ ಗೆ ಎರಡು ಮದುವೆಯಾಗಿದೆ. ಮೊದಲ ಪತ್ನಿ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಬಳಿಕ ಅವರು ಮೃತಪಟ್ಟಿದ್ದಾರೆ.

ಎರಡನೇ ಮದುವೆಯಾಗಿದ್ದ ದಿವಾಕರ್ ನ ಎರಡನೇ ಪತ್ನಿ ಮೊದಲಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಎರಡನೇ ಬಾರಿ ಮತ್ತೆ ಹೆಣ್ಣು ಮಗುವನ್ನು ಹೆತ್ತಿರುವುದು ದಿವಾಕರ್ ಕೋಪಕ್ಕೆ ಕಾರಣವಾಗಿದೆ. ಆಗಸ್ಟ್ ತಿಂಗಳಲ್ಲಿ ದಿವಾಕರ್ ನ ಎರಡನೇ ಪತ್ನಿ ಮಗುವಿಗೆ ಜನ್ಮ ನೀಡಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಗಂಡು ಮಗು ಬೇಕೆಂದು ಪತ್ನಿಯೊಡನೆ ನಿತ್ಯವೂ ಜಗಳವಾಡುತ್ತಿದ್ದ ಭಾನುವಾರ ಕುಡಿದು ಬಂದು ತನ್ನ ಪೋಷಕರೊಂದಿಗೆ ಜಗಳವಾಡುತ್ತಿದ್ಧ. ಈ ವೇಳೆ ಹೆಂಡತಿಯ ಮಡಿಲಲ್ಲಿ ಇದ್ದ ಒಂದು ತಿಂಗಳ ಹೆಣ್ಣು ಮಗುವನ್ನು ಕಸಿದುಕೊಂಡು ನೆಲಕ್ಕೆ ಎಸೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಮೃತಪಟ್ಟಿದೆ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.

Crime News: ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದವನ ಬಂಧನ

ದಿವಾಕರ್ ಪತ್ನಿ ದೀಪು ನೀಡಿದ ದೂರಿನ ಮೇರೆಗೆ ದಿವಾಕರ್ ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.