Thursday, 3rd October 2024

Crime News: ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದವನ ಬಂಧನ

Crime News

ಹಣದ ವಿಚಾರಕ್ಕೆ (Money Dispute) ಸಂಬಂಧಿಸಿ ವ್ಯಕ್ತಿಯೊಬ್ಬ ಲೈಂಗಿಕ ಕಾರ್ಯಕರ್ತೆಯನ್ನು (Sex Worker) ಕೊಲೆ ಮಾಡಿ (Crime News) ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ ಬಿಸಾಡಿದ ಘಟನೆ ಚೆನ್ನೈನಲ್ಲಿ (chennai) ನಡೆದಿದೆ. ಆರೋಪಿಯನ್ನು ಗುರುವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ತೋರೈಪಕ್ಕಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಿವಗಂಗಾ ಜಿಲ್ಲೆಯ ಮಣಿಕಂದನ್ ಎಂಬಾತ ಹಣದ ವಿಚಾರಕ್ಕೆ ಸಂಬಂಧಿಸಿ ಲೈಂಗಿಕ ಕಾರ್ಯಕರ್ತೆಯಾಗಿದ್ದ ಮಾಧವರಂ ಮೂಲದ 32 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ಹಾಕಿ ಎಸೆದಿದ್ದಾನೆ.

ತೊರೈಪಾಕ್ಕಂನ ಐಟಿ ಕಾರಿಡಾರ್ ಬಳಿಯ ವಸತಿ ಪ್ರದೇಶದಲ್ಲಿ ಸೂಟ್ ಕೇಸ್‌ನಲ್ಲಿ ಮಹಿಳೆಯ ಕತ್ತರಿಸಿದ ದೇಹದ ಭಾಗಗಳನ್ನು ತೊರೈಪಕ್ಕಂ ಪೊಲೀಸರು ಪತ್ತೆ ಹಚ್ಚಿದ್ದು, ಬಳಿಕ ತನಿಖೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆಕೆಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

Crime News

ವಿಚಾರಣೆ ವೇಳೆ ಮಣಿಕಂದನ್ ಹಣದ ವಿಚಾರವಾಗಿ ಮಹಿಳೆಯನ್ನು ಸುತ್ತಿಗೆಯಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ಹಾಕಿ ಎಸೆದಿರುವುದಾಗಿ ತಿಳಿಸಿದ್ದಾನೆ.

ಬುಧವಾರ ತಡರಾತ್ರಿವರೆಗೂ ಮಹಿಳೆ ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿ ಅವರ ಸಹಾಯದಿಂದ ಮಹಿಳೆಯ ಮೊಬೈಲ್‌ ಟ್ರ್ಯಾಕ್ ಮಾಡಿದಾಗ ಆಕೆಯ ಶವ ಸೂಟ್ ಕೇಸ್ ನಲ್ಲಿ ತೋರೈಪಕ್ಕಂ ಬಳಿ ಸಿಕ್ಕಿದೆ.

Anna Sebastian Perayil: ಕೆಲಸದ ಒತ್ತಡದಿಂದ ಮಗಳು ಮೃತಪಟ್ಟರೂ ಅಂತ್ಯಕ್ರಿಯೆಗೆ ಕಂಪನಿಯಿಂದ ಯಾರೂ ಬಂದಿಲ್ಲ; ತಾಯಿಯ ಮನಮಿಡಿಯುವ ಪತ್ರ

ಪೊಲೀಸರು ಸಿಸಿಟಿವಿ ಕೆಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಮಣಿಕಂದನ್ ನನ್ನು ಬಂಧಿಸಿದ್ದಾರೆ.