Friday, 13th December 2024

ಸಿಆರ್‌ಪಿಎಫ್‌ ವಾಹನಕ್ಕೆ ಟ್ರಕ್‌ ಡಿಕ್ಕಿ: ಸಿಬ್ಬಂದಿ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಅಪಘಾತ ದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿ ದ್ದಾರೆ.

ಹೈದರ್‌ಪೊರಾ ಬೈಪಾಸ್‌ ಪ್ರದೇಶದಲ್ಲಿ ಸಿಆರ್‌ಪಿಎಫ್‌ ವಾಹನಕ್ಕೆ ಟ್ರಕ್‌ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸಿಆರ್‌ಪಿಎಫ್‌ನ ಒಟ್ಟು 13 ಸಿಬ್ಬಂದಿ ಗಾಯ ಗೊಂಡಿದ್ದರು.

ಗಾಯಗೊಂಡಿದ್ದ ಎಲ್ಲ ಸಿಬ್ಬಂದಿಯನ್ನೂ ಬಿಎಸ್‌ಎಫ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ವಾಗಿ ಗಾಯಗೊಂಡಿದ್ದ ಕಾನ್‌ಸ್ಟೆಬಲ್‌  ಎಂ.ಎನ್‌.ಮಣಿ ಅವರು ಮೃತಪಟ್ಟಿರುವುದಾಗಿ ವರದಿ ಯಾಗಿದೆ. ಎಎಸ್‌ಐ ಜಸ್ರಾಜ್‌ ಮತ್ತು ಕಾನ್‌ಸ್ಟೆಬಲ್‌ ಸುಶಾಂತ್‌ ಬಿಸ್ವಾಸ್‌ ಅವರನ್ನು ಸೇನೆಯ 92 ಬೇಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.