Sunday, 13th October 2024

ಇಂದಿನಿಂದ ಸಿಟಿಇಟಿ-2022 ಟೆಸ್ಟ್ ಆರಂಭ

ವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ವಿವಿಧ ನಗರಗಳಲ್ಲಿ 2022 ರ ಡಿಸೆಂಬರ್ 28 ರಿಂದ 07 ಫೆಬ್ರವರಿ 2023 ರವರೆಗೆ ಕಂಪ್ಯೂಟರ್ ಆಧಾರಿತ ಮೋಡ್ನಲ್ಲಿ ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ನಡೆಸಲಿದೆ.

ಎಲ್ಲಾ ಅರ್ಜಿದಾರರಿಗೆ ನಿಗದಿಪಡಿಸಿದ ಪರೀಕ್ಷೆಯ ದಿನಾಂಕ ಮತ್ತು ಪರೀಕ್ಷೆಯ ನಗರಕ್ಕೆ ಸಂಬಂಧಿಸಿದ ವಿವರಗಳನ್ನು ಸಿಟಿಇಟಿ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗಿದೆ. ಅಭ್ಯರ್ಥಿಗಳು ತಮ್ಮ ದಿನಾಂಕಗಳನ್ನು ವೀಕ್ಷಿಸಲು ಸಿಟಿಇಟಿ ವೆಬ್ಸೈಟ್ನಲ್ಲಿ ಲಾಗ್ ಇನ್ ಮಾಡ ಬಹುದು.

ಪರೀಕ್ಷಾ ಕೇಂದ್ರದ ಸಂಪೂರ್ಣ ವಿವರಗಳು ಮತ್ತು ಪರೀಕ್ಷೆಯ ಶಿಫ್ಟ್ / ಸಮಯವನ್ನು ಪ್ರತಿ ಅರ್ಜಿದಾರರ ಪ್ರವೇಶ ಪತ್ರದಲ್ಲಿ ನಮೂದಿಸಲಾಗುತ್ತದೆ, ಇದು ಡೌನ್ಲೋಡ್ ಮಾಡಲು ಲಭ್ಯವಿರುತ್ತದೆ. ಪರೀಕ್ಷಾ ದಿನಾಂಕಕ್ಕೆ ಕೇವಲ ಎರಡು ದಿನಗಳ ಮೊದಲು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.