Saturday, 14th December 2024

ಗೋವಾ: ಕರ್ಫ್ಯೂ ಕಾಲಾವಧಿ ಜೂ.28 ರವರೆಗೆ ವಿಸ್ತರಣೆ

ಪಣಜಿ : ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಗೋವಾ ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು ಜೂ.28 ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಶಾಪಿಂಗ್ ಮಾಲ್, ಮೀನು ಮಾರುಕಟ್ಟೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆ ಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಜಾರಿಯಲ್ಲಿರುವ ಕರ್ಫ್ಯೂ ಜೂನ್ 21 ರಂದು ಬೆಳಿಗ್ಗೆ ಮುಕ್ತಾಯಗೊಳ್ಳುತ್ತಿತ್ತು. ಆದರೆ, ರಾಜ್ಯ ಸರ್ಕಾರ ಜೂನ್ 28 ರ ವರೆಗೆ ಕರ್ಫ್ಯೂ ವಿಸ್ತರಣೆ ಮಾಡಿದೆ.

ಮೂರನೇಯ ಹಂತದಲ್ಲಿ ಕರ್ಫ್ಯೂ ವಿಸ್ತರಣೆ ಮಾಡುವ ಸಂದರ್ಭ ಶಾಪಿಂಗ್ ಮಾಲ್, ಸಿನೆಮಾ ಹಾಲ್, ಮಲ್ಟಿಪ್ಲೆಕ್ಸ್ ಮತ್ತು ಮನೋರಂಜನಾ ವಿಭಾಗ ತೆರೆಯಲು ಹಾಗೂ ಅಗತ್ಯ ವಸ್ತುಗಳ ಅಂಗಡಿ ಮತ್ತು ರೇಶನ್ ಅಂಗಡಿಗಳು ಬೆಳಿಗೆ 7 ರಿಂದ ಮಧ್ಯಾನ್ಹ 3 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.