Friday, 13th December 2024

ಗೋವಾದಲ್ಲಿ ಕರ್ಫ್ಯೂ ಆ.23 ರ ವರೆಗೆ ವಿಸ್ತರಣೆ

ಪಣಜಿ: ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ಫ್ಯೂವನ್ನು ಕೋವಿಡ್ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಆ.23 ರ ವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್ ಎರಡನೇಯ ಅಲೆ ಆರಂಭಗೊಂಡ ಸಂದರ್ಭದಲ್ಲಿ ಮೇ 9 ರಂದು ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸ ಲಾಗಿತ್ತು. ನಂತರದ ದಿನಗಳಲ್ಲಿ ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತಿದೆ. ಮತ್ತೊಂದು ಸಾರಿ ಆಗಸ್ಟ್ 23 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.

ಕರ್ಫ್ಯೂ ಹಿನ್ನೆಲೆ ರಾಜ್ಯದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೂ ನಿರ್ಬಂಧ ಮುಂದುವರೆಯಲಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನ ಕೇವಲ 50 ಜನರ ಉಪಸ್ಥಿತಿಯಲ್ಲಿ ನಡೆಸಲು ಪರವಾನಗಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಕ್ಯಾಸಿನೊ, ಸಿನಿಮಾ ಹಾಲ್, ಕ್ರೂಜ್, ಸ್ಪಾಗಳನ್ನು ಆರಂಭಿಸಲು ಇದುವರೆಗೂ ಅನುಮತಿ ನೀಡಿಲ್ಲ.

ಗೋವಾ ರಾಜ್ಯಕ್ಕೆ ಕೇರಳದಿಂದ ಆಗಮಿಸುವವರಿಗೆ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಖಡ್ಡಾಯವಾಗಿದೆ. ಇತರೆ ರಾಜ್ಯಗಳಿಂದ ಆಗಮಿಸುವವರಿಗೆ ಕೋವಿಡ್ ಎರಡೂ ಲಸಿಕೆ ಪಡೆದಿರಬೇಕು ಅಥವಾ ಕೋವಿಡ್ ಎಂಟಿಜನ್ ನೆಗೆಟಿವ್ ವರದಿ ಹೊಂದಿರಬೇಕು.