Saturday, 14th December 2024

ದಾಂತೇವಾಡ: ಸ್ಪೋಟಕ್ಕೆ 11 ಯೋಧರ ಸಾವು

ತ್ತೀಸ್ ಗಢ: ದಾಂತೇವಾಡದಲ್ಲಿ ಅರನಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರಾನ್ಪುರದಲ್ಲಿ ನಕ್ಸಲರು ಸ್ಫೋಟ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ದಾಂತೇವಾಡದಲ್ಲಿ ನಕ್ಸಲರು ಸುಧಾರಿತ ಸ್ಪೋಟಕ ಬಳಸಿ ದುಷ್ಕೃತ್ಯ ನೆರೆದಿದ್ದಾರೆ. ನಕ್ಸಲರು ಡಿಆರ್ ಜಿ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ನೆಲ ಬಾಂಬ್ ಮೂಲಕ ಸ್ಪೋಟಿಸಿದ್ದಾರೆ.

ನಕ್ಸಲರ ಸುಧಾರಿತ ಸ್ಪೋಟಕದಲ್ಲಿ ಡಿಆರ್ ಜಿ ಸಿಬ್ಬಂದಿ ವಾಹನದ ಚಾಲಕ, 10 ಯೋಧರು ಹುತಾತ್ಮರಾಗಿದ್ದಾರೆ.